

ಸರಗೂರು: ತಾಲೂಕಿನ ದೇವಲಾಪುರ ಗ್ರಾಮದಲ್ಲಿ ಅಳಗಂಚಿ ಸತ್ಯವತಿ ಶ್ರೀ ಉದ್ದವ ಮಾರಮ್ಮನ 7ನೇ ವರ್ಷದ ಜಾತ್ರಾ ಮಹೋತ್ಸವ ಬುಧವಾರ ಶ್ರದ್ಧಾ-ಭಕ್ತಿಯಿಂದ ನಡೆಯಿತು.
ಹಬ್ಬದ ಹಿನ್ನೆಲೆಯಲ್ಲಿ ಕೆರೆಯಲ್ಲಿ ಗಂಗೆ ಪೂಜೆ ಸಲ್ಲಿಸಲಾಯಿತು. ಬಳಿಕ ಪೂರ್ಣಕುಂಭ ಕಳಸ ಹೊತ್ತು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ನಂತರ ದೇಗುಲದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು.
ಗಣಪತಿ ಹೋಮ, ಪುಣ್ಯಾಹ ಕಳಶ ಸ್ಥಾಪನೆ, ದುರ್ಗಹೋಮ, ಕುಂಕುಮಾರ್ಚನೆ ಮುಂತಾದ ಪೂಜೆ ನಡೆಯಿತು. ಉತ್ಸವ ದೇವಾಲಯ ಬಳಿ ತಲುಪುತ್ತಿದ್ದಂತೆ ವಿಶೇಷ ಪೂಜೆ, ಮಂಗಳಾರತಿ ನೆರವೇರಿಸಿ ಪ್ರಸಾದ ವಿನಿಯೋಗ ಮಾಡಲಾಯಿತು.
ದೇವಾಲಯದ ಸಮಿತಿ ಅಧ್ಯಕ್ಷ ಡಿ.ಜಿ.ಸೋಮಣ್ಣ, ಉಪಾಧ್ಯಕ್ಷ ಡಿ.ಜಿ.ಶಿವಣ್ಣ, ಗ್ರಾಪಂ ಸದಸ್ಯರಾದ ಶಿವಶಂಕರ್, ನಾಗಮ್ಮ ನಾಗೇಂದ್ರ, ಎಪಿಎಂಸಿ ಮಾಜಿ ಅಧ್ಯಕ್ಷ ಸಿದ್ದರಾಜು , ಮುಖಂಡರಾದ ಶಿವಣ್ಣ, ಡಿ.ಜಿ.ಚಿನ್ನಸ್ವಾಮಿ, ಮಹೇಶ್, ಪುಟ್ಟರಾಜು, ಅಣ್ಣಯ್ಯಸ್ವಾಮಿ, ಶಿವರಾಜು, ನಂಜಪ್ಪ ಇತರರು ಉಪಸ್ಥಿತರಿದ್ದರು.