ವಿಜೃಂಭಣೆಯ ದುರ್ಗಾದುರ್ಗೇಶ್ವರಿ ದೇವಿ ಉತ್ಸವ

29dhmp1
ದುರ್ಗಾ ದುರ್ಗೇಶ್ವರಿ ಉತ್ಸವದ ಅಂಗವಾಗಿ ಗೌರಿಪುರದಲ್ಲಿ ಶಾಸಕ ಎಚ್.ಪಿ.ಮಂಜುನಾಥ್ ಮೆರವಣಿಗೆಯಲ್ಲಿ ಭಾಗಿಯಾಗಿದ್ದರು.
Published on

ಧರ್ಮಾಪುರ: ಗೌರಿಪುರ ಗ್ರಾಮದಲ್ಲಿ ದುರ್ಗಾ ದುರ್ಗೇಶ್ವರಿ (ಹಂಪಾಪುರಮ್ಮ) ದೇವಿ ಉತ್ಸವ ಬುಧವಾರ ವಿಜೃಂಣೆಯಿಂದ ನಡೆಯಿತು.

ಗ್ರಾಮದ ಸಾವಿರಕ್ಕೂ ಹೆಚ್ಚು ಜನರು ಮೆರವಣಿಗೆಯಲ್ಲಿ ಹೊರಟು ಕಾಲುವೆಯಲ್ಲಿ ಪೂಜೆ ಸಲ್ಲಿಸಿದ ನಂತರ ದೇವರ ಉತ್ಸವಕ್ಕೆ ಚಾಲನೆ ದೊರೆಯಿತು. ಬಳಿಕ ಗ್ರಾಮದ ಬೀದಿಗಳಲ್ಲಿ ದೇವರ ಉತ್ಸವ ಮೂರ್ತಿಯನ್ನು ಮೆರವಣಿಗೆ ಮಾಡಲಾಯಿತು. ಮಂಗಳವಾದ್ಯ, ತಮಟೆ ಸದ್ದಿಗೆ ಯುವಕರು ಕುಣಿದು ಸಂಭ್ರಮಿಸಿದರು. ಗುರುವಾರ ಬೆಳಗ್ಗೆವರೆಗೆ ಭಕ್ತರು ಉತ್ಸವದಲ್ಲಿ ಭಾಗವಹಿಸಿದ್ದರು.

ಶಾಸಕ ಎಚ್.ಪಿ.ಮಂಜುನಾಥ್ ದೇವರಿಗೆ ಪೂಜೆ ಸಲ್ಲಿಸಿದರು. ಗ್ರಾಪಂ ಉಫಾಧ್ಯಕ್ಷೆ ಗೌರಮ್ಮ, ಸದಸ್ಯರಾದ ಪದ್ಮಮ್ಮ ನಾರಾಯಣಗೌಡ, ಗೋವಿಂದಶೆಟ್ಟಿ, ಮಾಜಿ ಸದಸ್ಯ ಜವರನಾಯಕ, ನಾಡಯಾಜಮಾನ ಕರಿಗೌಡ, ಯಜಮಾನರಾದ ಬಸುವರಾಜನಾಯಕ, ಚಕ್ಕಣ್ಣೆಗೌಡ, ಜವರೇಗೌಡ, ನಾರಾಯಣಗೌಡ ಇತರರು ಹಬ್ಬದ ಯಶಸ್ಸಿಗೆ ಶ್ರಮಿಸಿದರು. ಗ್ರಾಮದ ಯುವಕ ಸಂಘದಿಂದ ಅನ್ನದಾನ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net