ವಿಜೃಂಭಣೆಯ ಗಣೇಶೋತ್ಸವ ಮೆರವಣಿಗೆ

29arsph1ep
ಅರಸೀಕೆರೆ ಎಪಿಎಂಸಿ ಪ್ರಾಂಗಣದಲ್ಲಿ ವಿಘ್ನ ವಿನಾಯಕನಿಗೆ ಪೂಜೆ ಸಲ್ಲಿಸಲಾಯಿತು.
Published on

ಅರಸೀಕೆರೆ: ತಾಲೂಕಿನ ಐತಿಹಾಸಿಕ ಗಣೇಶೋತ್ಸವ ಎರಡನೇ ದಿನವಾದ ಶನಿವಾರವೂ ನಗರದಲ್ಲಿ ವಿಜೃಂಭಣೆಯಿಂದ ಜರುಗಿತು. ರೈಲ್ವೆ ನಿಲ್ದಾಣ, ಮೊದಲಿಯಾರ್‌ಬೀದಿ, ಸಾಯಿನಾಥ ರಸ್ತೆ, ಗರುಡನಗಿರಿ, ಲಕ್ಷ್ಮೀಪುರ ಸೇರಿದಂತೆ ಹಲವು ಬಡಾವಣೆಗಳಲ್ಲಿ ಉತ್ಸವ ನಡೆಯಿತು. ಬಳಿಕ ತಾಲೂಕು ಕಚೇರಿವರೆಗೆ ತೆರಳಿ ಎಪಿಎಂಸಿ ಪ್ರವೇಶಿಸಿತು. ಕೊಬ್ಬರಿ ವರ್ತಕರು, ಲಾರಿ ಚಾಲಕರು, ಮಾಲೀಕರು, ಹಮಾಲರು, ವ್ಯಾಪಾರಸ್ಥರು ಈಡುಗಾಯಿ ಒಡೆದು ಭಕ್ತಿ ಸಮರ್ಪಿಸಿದರು.


ಉತ್ಸವ ಸಾಗುತ್ತಿದ್ದ ಮಾರ್ಗದುದ್ದಕ್ಕೂ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಪ್ರಸಾದ ವಿತರಿಸಿದರು. ತಾಲೂಕು ಆಡಳಿತ, ನಗರಸಭೆ ಸೇರಿದಂತೆ ವಿವಿಧ ಸರ್ಕಾರಿ ಕಚೇರಿಗಳ ನೌಕರರು ಪೂಜೆ ಸಲ್ಲಿಸಿದರು. ಮುಂಬೈ ಹಾಗೂ ಹುಬ್ಬಳ್ಳಿ ಡಿಜೆ ಧ್ವನಿವರ್ಧಕದ ಸದ್ದಿಗೆ ಯುವಕರ ಕುಣಿತ ರಂಗು ನೀಡಿತು.


ಶಾಸಕ ಕೆ.ಎಂ.ಶಿವಲಿಂಗೇಗೌಡ, ಬಿಜೆಪಿ ಮುಖಂಡ ಎನ್.ಆರ್.ಸಂತೋಷ್, ನಗರಸಭೆ ಅಧ್ಯಕ್ಷ ಸಿ.ಗಿರೀಶ್, ತಹಸೀಲ್ದಾರ್ ವಿಭಾ ವಿ ರಾಥೋಡ್, ನಗರಸಭೆ ಸದಸ್ಯ ಎಂ.ಆರ್.ವೆಂಕಟಮುನಿ, ಜ್ಯೋತಿ ಗಂಗಧರ್ ಇತರರು ಉತ್ಸವದಲ್ಲಿ ಹೆಜ್ಜೆ ಹಾಕಿದರು. ತಡರಾತ್ರಿ ಕಂತೇನಹಳ್ಳಿ ಗ್ರಾಮದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆಯಲಿದ್ದು, ಭಾನುವಾರ ಮಧ್ಯಾಹ್ನ ತೆಪ್ಪೋತ್ಸವದ ಬಳಿಕ ದೊಡ್ಡಕೆರೆಯಲ್ಲಿ ವಿಸರ್ಜನಾ ಮಹೋತ್ಸವ ಸಂಪನ್ನಗೊಳ್ಳಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net