ವಿಜೃಂಭಣೆಯ ಕಳಸ ತಾಲೂಕು ಉತ್ಸವ

7kls2 web
Published on

ಕಳಸ: ಕಳಸ ತಾಲೂಕು ಉತ್ಸವ ಮಂಗಳವಾರ ವಿಜೃಂಭಣೆಯಿಂದ ನಡೆಯಿತು. ಉತ್ಸವದ ಮೆರವಣಿಗೆಯನ್ನು ಬೆಳಗ್ಗೆ ಶಾಸಕ ಎಂ.ಪಿ.ಕುಮಾರಸ್ವಾಮಿ ಉದ್ಘಾಟಿಸಿದರು. ನಂತರ ಕಲಶೇಶ್ವರ ದೇವಸ್ಥಾನದ ಬಳಿ ಬೃಹತ್ ಮೆರವಣಿಗೆ ಪ್ರಾರಂಭಗೊಂಡು ಮುಖ್ಯ ರಸ್ತೆಯಲ್ಲಿ ಸಾಗಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಕೊನೆಗೊಂಡಿತು.

ಮೆರವಣಿಗೆಯಲ್ಲಿ ವಿವಿಧ ಶಾಲಾ ಕಾಲೇಜುಗಳಿಂದ ಸ್ತಬ್ಧ ಚಿತ್ರಗಳು, ಹುಲಿಕುಣಿತ, ಪ್ರಥಮದರ್ಜೆ ಕಾಲೇಜಿನ ವಿದ್ಯಾಥಿಗಳಿಂದ ಕಂಸಾಲೆ ನೃತ್ಯ, ಬೃಹತ್ ಗಾತ್ರದ ಕೋಳಿ, ಸಿಂಹ, ಗೊರಿಲ್ಲ ಗೊಂಬೆಗಳು, ಚೆಂಡೆ ಮುಂತಾದವುಗಳು ಮೆರವಣಿಗೆಗೆ ಮೆರುಗು ನೀಡಿದವು.

ಕೆಪಿಎಸ್ ಆವರಣದಲ್ಲಿ ವಿವಿಧ ರೀತಿಯ ತಿಂಡಿ ತಿನಿಸುಗಳ ಅಂಗಡಿ ಮಳಿಗೆಗಳು, ಇಲಾಖೆಯ ಮಾಹಿತಿ ಮಳಿಗೆಗಳು ಗಮನ ಸೆಳೆದವು. ಮೆರವಣಿಗೆಯುದ್ದಕ್ಕೂ ಸಂಘ ಸಂಸ್ಥೆಗಳು, ಕಳಸ ಮಸೀದಿಯಿಂದ ತಂಪು ಪಾನೀಯ ವ್ಯವಸ್ಥೆ ಮಾಡಲಾಗಿತ್ತು. ಮೆರವಣಿಗೆಯಲ್ಲಿ ಸಾವಿರಾರು ಜನ ಭಾಗವಹಿಸಿದ್ದರು.

ಮಧ್ಯಾಹ್ನ ಎರಡರಿಂದ ವಿವಿಧ ಶಾಲಾ ಮಕ್ಕಳು ಮತ್ತು ಸ್ಥಳೀಯರಿಂದ ವಿವಿಧ ಮನರಂಜನಾ ಕಾರ್ಯಕ್ರಮ ನೆರವೇರಿತು. ನಂತರ ಸಭಾ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಹೆಜ್ಜೆನಾದ ತಂಡದಿಂದ ವೈವಿಧ್ಯಮಯ ಮನರಂಜನಾ ಕಾರ್ಯಕ್ರಮ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net