ವಿಜಿ ಮಹಿಳಾ ಕಾಲೇಜು ಸಾಧನೆ

0112KLB03
Published on

ಕಲಬುರಗಿ: ನಗರದ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದ ೪೫ ವಿದ್ಯಾರ್ಥಿನಿಯರು ವಿಜಯಪುರದ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಯುವಜನೋತ್ಸವ ೧೯ನೇ ಶಕ್ತಿ ಸಂಭ್ರಮದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿ ಸಾಧನೆ ಮೆರೆದಿದ್ದಾರೆ.

ಏಕಾಂತ ನಾಟಕ ಪ್ರಥಮ, ಸ್ಟಿಕ್ ದ್ವಿತೀಯ, ಜಾನಪದ ಸಂಗೀತ (ದ್ವಿ), ಕ್ಲಾಸಿಕಲ್ ನೃತ್ಯ (ದ್ವಿ), ಪ್ರೊಸೇಷನ್ (ದ್ವಿ), ವೆಸ್ಟರ್ನ್ ವೋಕಲ್ ಸೋಲೋ (ತೃ), ಸ್ಫಾಟ್ ಫೋಟೋಗ್ರಫಿಯಲ್ಲಿ ತೃತೀಯ ಸ್ಥಾನ ಪಡೆದಿದ್ದು, ಥೇಟರ್ ಸ್ಪರ್ಧೆಗಳಲ್ಲಿ ರನ್ನರ್ ಅಪ್ ಟ್ರೋಫಿ ಪಡೆದು, ಕಾಲೇಜಿಗೆ ಕೀರ್ತಿ ತಂದಿದ್ದಾರೆ.

ಟೀಮ್ ಮ್ಯಾನೇಜರ್ ಡಾ.ಸವಿತಾ ಬೋಳಶೆಟ್ಟಿ, ದಾನಮ್ಮ ಬಿರಾದಾರ ಸೇರಿ ಕಾಲೇಜಿನ ಎಲ್ಲ ಉಪನ್ಯಾಸಕರು ನಿರ್ವಹಣೆ, ಮಾರ್ಗದರ್ಶನ ನೀಡಿದ್ದರು. ವಿದ್ಯಾರ್ಥಿನಿಯರ ಸಾಧನೆಗೆ ಹೈದರಾಬಾದ್ ಕರ್ನಾಟಕ ಶಿP್ಷÀಣ ಸಂಸ್ಥೆ ಅಧ್ಯಕ್ಷ ಶಶಿಲ್ ನಮೋಶಿ, ಆಡಳಿತ ಮಂಡಳಿ ಸದಸ್ಯರು, ಪ್ರಾಚಾರ್ಯ ಡಾ.ರಾಜೇಂದ್ರ ಕೊಂಡ ಅಭಿನಂದಿಸಿದ್ದಾರೆ.

ಪ್ರಾಚಾರ್ಯ ಡಾ.ರಾಜೇಂದ್ರ ಕೊಂಡ ಅವರ ಮಾರ್ಗದರ್ಶನ, ಎಚ್‌ಕೆಇ ಅಧ್ಯಕ್ಷ ಶಶೀಲ ನಮೋಶಿ ಸೇರಿ ಎಲ್ಲರ ಸಹಕಾರದಿಂದ ವಿದ್ಯಾರ್ಥಿಗಳಲ್ಲಿನ ಪ್ರತಿಭೆ ಅನಾವರಣಕ್ಕೆ ವೇದಿಕೆ ದೊರಕಿ, ಸಾಧನೆ ಸಾಧ್ಯವಾಗಿದೆ.

| ಡಾ.ಸವಿತಾ ಬೋಳಶೆಟ್ಟಿ

ಟೀಮ್ ಮ್ಯಾನೇಜರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net