ವಿಜಯಾ ಆಸ್ಪತ್ರೆಯಲ್ಲಿ ಅಪರೂಪದ ಶಸ್ತ್ರ ಚಿಕಿತ್ಸೆ

vijaya hospital
Published on

ಬೀದರ್: ಇಲ್ಲಿನ ಸಿದ್ಧಾರೂಢ ಗುಂಪಾ ಹತ್ತಿರದ ಹೈದರಾಬಾದ್ ರಿಂಗ್ ರೋಡ್ ನಲ್ಲಿರುವ ವಿಜಯಾ ಆಸ್ಪತ್ರೆಯಲ್ಲಿ ಅಪರೂಪದ ಶಸ್ತ್ರಚಿಕಿತ್ಸೆ ನಡೆಸಿ ಮಹಿಳೆಯನ್ನು ಪ್ರಾಣಾಪಾಯದಿಂದ ಪಾರು ಮಾಡಲಾಗಿದೆ.

ಗರ್ಭಕೋಶದಲ್ಲಿ ಬೆಳೆದಿದ್ದ 3 ಕೆಜಿ ಗಡ್ಡೆಯನ್ನು ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆಯಲಾಗಿದೆ. 44 ವರ್ಷದ ಮಹಿಳೆ ಇತ್ತೀಚೆಗೆ ಆಸ್ಪತ್ರೆಗೆ ದಾಖಲಾಗಿದ್ದರು. ವಿವಿಧ ಸ್ಕ್ಯಾನಿಂಗ್ ಮಾಡಿದ ನಂತರ ಗಡ್ಡೆ ಇರುವುದು ಗೊತ್ತಾಗಿದೆ. ದೊಡ್ಡ ಗಾತ್ರದ ಗಡ್ಡೆ ಬಲಗಡೆಯ ಮೂತ್ರನಾಳದ ಮೇಲೆ ಒತ್ತಡ ಹೇರಿತ್ತು. ಅದರ ಜತೆಗೆ ದೊಡ್ಡ ರಕ್ತ ನಾಳದ ಮೇಲೂ ಒತ್ತಡ ಬಿದ್ದಿತ್ತು. ತಜ್ಞ ವೈದ್ಯರ ತಂಡ ಆಪರೇಷನ್ ನಡೆಸಿ ಮಹಿಳೆ ಜೀವ ಉಳಿಸಿದ್ದಾರೆ.

ಡಾ.ವಿಜಯಾ ಹತ್ತಿ, ಡಾ.ಸೋಮಶೇಖರ ಸೋಲಪುರೆ, ಡಾ.ವಿನೋದ ಖೇಳಗಿ, ಅರವಳಿಕೆ ತಜ್ಞ ಡಾ.ಅಜಯ ಪಾಟೀಲ್, ನಸ್೯ ಗಳಾದ ಸುಭಾಷ, ರಾಜಕುಮಾರ ಇತರರು ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಹೊಸದಾಗಿ ಆರಂಭವಾದ ವಿಜಯಾ ಆಸ್ಪತ್ರೆ ಅನೇಕ ಅತ್ಯಾಧುನಿಕ ಸೌಲಭ್ಯ, ಯಂತ್ರೋಪಕರಣಗಳನ್ನು ಹೊಂದಿದೆ. ವಿಶೇಷವಾಗಿ ಮಹಿಳೆಯರ ಆರೋಗ್ಯ ಸಮಸ್ಯೆ ನಿವಾರಣೆಗೆ ಜಾಸ್ತಿ ಕಾಳಜಿ ವಹಿಸುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net