ವಿಜಯವಾಣಿ ವಿದ್ಯಾರ್ಥಿ ಮಿತ್ರದಿಂದ ರಾಜ್ಯಕ್ಕೆ ೪ನೇ ರ‍್ಯಾಂಕ್

3blh1b ಸನ್ಮಾನ
Published on

ಬೈಲಹೊಂಗಲ/ಬೆಳವಡಿ: ಗ್ರಾಮದ ಪೇಂಟರ್‌ನ ಮಗ, ಮಲ್ಲಮ್ಮನ ಬೆಳವಡಿ ಗ್ರಾಮದ ಶ್ರೀ ಈಶಪ್ರಭು ಶಿಕ್ಷಣ ಸಂಸ್ಥೆಯ ವೀರರಾಣಿ ಮಲ್ಲಮ್ಮ ಸ್ಮಾರಕ ಪ್ರೌಢಶಾಲೆಯ ವಿದ್ಯಾರ್ಥಿ ಬಸನಗೌಡ ನಾಗನಗೌಡ ಮಲಗೌಡ್ರ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ೬೨೫ಕ್ಕೆ ೬೨೨ ಅಂಕ ಗಳಿಸುವ ಮೂಲಕ ಅಮೋಘ ಸಾಧನೆ ಮಾಡಿದ್ದಾನೆ.

ಶಾಲೆಗೆ ಬರುತ್ತಿದ್ದ ವಿಜಯವಾಣಿ `ವಿದ್ಯಾರ್ಥಿ ಮಿತ್ರ' ಸಂಚಿಕೆಯನ್ನು ಸಮಗ್ರವಾಗಿ ಓದಿ, ವಿಷಯ ಸಂಗ್ರಹಿಸಿ ಅಭ್ಯಸಿಸುತ್ತಿದ್ದೆ. ನಮ್ಮ ಸಂಸ್ಥೆಯ ಅಧ್ಯಕ್ಷರು, ಕಾರ್ಯದರ್ಶಿ, ಶಿಕ್ಷಕರ ಮಾರ್ಗದರ್ಶನ ಹಾಗೂ ಸಲಹೆಯಿಂದ ನಾಲ್ಕನೇ ರ‍್ಯಾಂಕ್ ಪಡೆಯಲು ಸಾಧ್ಯವಾಯಿತು ಎನ್ನುತ್ತಾನೆ ವಿದ್ಯಾರ್ಥಿ.

ತಾಯಿ ಸುನಂದಾ ಅಂಗನವಾಡಿ ಶಿಕ್ಷಕಿ, ತಂದೆ ಮಲಗೌಡ ಪೇಂಟರ್ ಕೆಲಸ ಮಾಡುತ್ತಾನೆ. ಬಡ ಕುಟುಂಬ ಮಗನ ಓದಿಗೆ ಕಷ್ಪಪಡುತ್ತಿತ್ತು. ಆದರೆ ಪ್ರತಿಭಾವಂತನಾದ ಮಗ ಎನ್‌ಎನ್‌ಎಂಎಸ್ ಪರೀಕ್ಷೆಯಲ್ಲಿ ಪಾಸಾಗಿ ಅದರಿಂದ ಬಂದ ಪ್ರತಿ ವರ್ಷದ ೧೨ ಸಾವಿರ ರೂ. ಹಣದಿಂದ ಶಿಕ್ಷಣ ಪೂರೈಸಿದ್ದಾನೆ.

ಕನ್ನಡ ೧೨೫, ಹಿಂದಿ, ಸಮಾಜ ವಿಜ್ಞಾನ, ವಿಜ್ಞಾನ ೧೦೦, ಗಣಿತ ೯೯, ಇಂಗ್ಲಿಷ್ ೯೮ ಅಂಕ ಪಡೆದಿರುವ ಮಲ್ಲಗೌಡ ಪಿಯು ಸೈನ್ಸ್ ಓದಿ ಜೆಇಇ, ಸಿಇಟಿ ಬರೆದು ಇಂಜಿನಿಯರಿಂಗ್ ಮಾಡುವ ಆಸೆ ಹೊತ್ತಿದ್ದಾನೆ.

ಮಾಜಿ ಶಾಸಕ, ಸಂಸ್ಥೆಯ ಅಧ್ಯಕ್ಷ ಡಾ.ವಿಶ್ವನಾಥ ಪಾಟೀಲ, ಕಾರ್ಯದರ್ಶಿ ಎಂ.ಎಂ. ಕಾಡೇಶನವರ, ಪ್ರಾಚಾರ್ಯ ಮಹಾಂತೇಶ ಉಪ್ಪಿನ, ಸಿಬ್ಬಂದಿ ವಿದ್ಯಾರ್ಥಿಯನ್ನು ಸನ್ಮಾನಿಸಿ, ಸಂತಸ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net