ವಿಜಯಲಕ್ಷ್ಮೀ ಜಾಲಹಳ್ಳಿ ಗ್ರಾಪಂ ಅಧ್ಯಕ್ಷೆ

25-DVD-1
Published on

ದೇವದುರ್ಗ: ಜಾಲಹಳ್ಳಿ ಗ್ರಾಪಂ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ಚುನಾವಣೆ ನಡೆಯಿತು. ಬಿಜೆಪಿ ಬೆಂಬಲಿತ ವಿಜಯಲಕ್ಷ್ಮೀ ತೋಟದ್ ಅಧ್ಯಕ್ಷೆಯಾಗಿ ಹಾಗೂ ಈರಪ್ಪ ಅರಕೇರಾ ಉಪಾಧ್ಯಕ್ಷರಾಗಿ ಆಯ್ಕೆಯಾದರು.

ವಿಜಯಲಕ್ಷ್ಮೀ ತೋಟದ್ 20 ಹಾಗೂ ಪ್ರತಿಸ್ಪರ್ಧಿ ಕಾಂಗ್ರೆಸ್ ಬೆಂಬಲಿತ ಹನುಮಂತಿ ರಾಂಪಳ್ಳಿ 12 ಮತ ಪಡೆದರು. ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಈರಪ್ಪ ಅರಕೇರಾ 18 ಹಾಗೂ ರಂಗನಾಥ ಕುದುರಿ 15 ಮತ ಪಡೆದರು. ಮೊದಲ ಅವಧಿಗೆ ಕಾಂಗ್ರೆಸ್ ಹಾಗೂ ಎಡಪಕ್ಷಗಳ ಬೆಂಬಲಿತ ಸದಸ್ಯರು ಅಧಿಕಾರ ಹಿಡಿದಿದ್ದರು. ಎರಡನೇ ಅವಧಿಗೆ ಕಾಂಗ್ರೆಸ್ ಬೆಂಬಲಿತ ಕೆಲ ಸದಸ್ಯರು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನು ಬೆಂಬಲಿಸಿದರು. 33 ಸದಸ್ಯ ಬಲದ ಗ್ರಾಪಂನಲ್ಲಿ ಬಿಜೆಪಿ ಬೆಂಬಲಿತ 16, ಕಾಂಗ್ರೆಸ್ ಬೆಂಬಲಿತ 11, ಹಾಗೂ ಐದು ಜನ ಎಡಪಕ್ಷಗಳ ಬೆಂಬಲಿತ ಸದಸ್ಯರಿದ್ದಾರೆ.

ಚುನಾವಣೆ ಅಧಿಕಾರಿಯಾಗಿ ತಾಪಂ ಇಒ ಬಸವರಾಜ ಹಟ್ಟಿ, ಸಹಾಯಕ ನಿರ್ದೇಶಕ ಅಣ್ಣರಾವ್ ನಾಯಕ ಕಾರ್ಯ ನಿರ್ವಹಿಸಿದರು. ತಾಪಂ ಮ್ಯಾನೇಜರ್ ಮಲ್ಲಿಕಾರ್ಜುನ ಕೊಪ್ಪರ, ಮಹೇಶ್ವರಿ, ಸಿಪಿಐ ಎನ್.ವೈ.ಗೂಂಡುರಾವ್, ಪಿಎಸ್‌ಐ ವೈಶಾಲಿ ಜಳಕಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net