ವಿಜಯಪುರದಲ್ಲಿ ಸರಣಿ ಕಳ್ಳತನಕ್ಕೆ ಯತ್ನ

pixlr
Published on

ವಿಜಯಪುರ: ವಿಜಯಪುರ ನಗರದ ಇಬ್ರಾಹಿಂಪುರ ಬಡಾವಣೆಯಲ್ಲಿ ಸರಣಿ ಕಳ್ಳತನಕ್ಕೆ ಯತ್ನಿಸಲಾಗಿದೆ. ಜ್ಯೋತಿ ಟ್ರೇಡರ್ಸನ ಸಿಮೆಂಟ್ ಹಾಗೂ ಪೇಂಟ್ ಅಂಗಡಿ, ದೃವ ಜ್ಯೂವೆಲರ್ಸ, ಕಿರಾಣಿ ಶಾಪ್, ಕಟಿಂಗ್ ಶಾಪ್ ಕಳ್ಳತನ ಯತ್ನ ಮಾಡಿದ್ದಾರೆ. ನಿನ್ನೆ ತಡ ರಾತ್ರಿ ನಡೆದ ಕಳ್ಳತನ ಪ್ರಕರಣದಲ್ಲಿ ಒಂದೇ ರಾತ್ರಿ ಮೂರ್ನಾಲ್ಕು ಅಂಗಡಿ ಕಳ್ಳತನ ಯತ್ನಿಸಲಾಗಿದ್ದು, ಸರಣಿ ಕಳ್ಳತನದ ವಿಡಿಯೋ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬೆಳಗಿನ ಜಾವ 3.30ರ ಸುಮಾರಿಗೆ ಮೂರ್ನಾಲ್ಕು ಕಳ್ಳರು ಶೆಟರ್ ಮುರಿಯುವ ದೃಶ್ಯ ಎದುರಿನ ಅಂಗಡಿಯಲ್ಲಿ ಸೆರೆಯಾಗಿದೆ. ಹಲವು ಅಂಗಡಿಗಳ ಶೆಟರ್ ಮುರಿಯಲು ಯತ್ನಿಸಲಾಗಿದ್ದು, ಶೆಟರ್ ಮುರಿಯದ ಕಾರಣ ಕಳ್ಳರು ಬಿಟ್ಟು ಪರಾರಿಯಾಗಿದ್ದಾರೆ. ವಿಜಯಪುರ ಜಲನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net