

ವಿಜಯಪುರ: ವಿಜಯಪುರ ನಗರದಲ್ಲಿ ಎರಡು ಗುಂಪುಗಳ ಮದ್ಯೆ ಗಲಾಟೆ ನಡೆದಿದ್ದು, ಈ ವೇಳೆ ಗುಂಡಿನ ದಾಳಿಯಾಗಿದೆ. ನಗರದ ಜಿಲ್ಲಾ ಪಂಚಾಯತಿ ಕಚೇರಿ ಹತ್ತಿರದ ಸ್ಮಶಾನದ ಬಳಿ ಘಟನೆ ನಡೆದಿದೆ. ವಿಜಯಪುರ ತಾಲೂಕಿನ ಬಾರಾಕೊಟ್ರಿ ತಾಂಡಾ ವಾಸಿ ಪದ್ದು ರಾಠೋಡ ಎಂಬಾತನಿಗೆ ಗಾಯವಾಗಿದೆ. ಎರಡು ಗುಂಪುಗಳ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆಯಾಗಿದ್ದು, ಗಲಾಟೆ ಮಧ್ಯೆ ಓರ್ವ ದುಷ್ಕರ್ಮಿ ಗುಂಡು ಹಾರಿಸಿದ್ದಾನೆ. ಗುಂಡೇಟಿನಿಂದ ಗಾಯಗೊಂಡ ಪದ್ದು ರಾಠೋಡನಿಗೆ ಸ್ಥಳಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟನಾ ಸ್ಥಳಕ್ಕೆ ಎಸ್ ಪಿ ಅನುಪಮ ಅಗರವಾಲ, ಹೆಚ್ಚುವರಿ ಎಸ್ ಪಿ ರಾಮ್ ಅರಸಿದ್ದಿ ಹಾಗೂ ಇತರೆ ಅಧಿಕಾರಿಗಳು ಭೇಟಿನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಜಲನಗರ ಪೊಲೀಸ್ ಠಾಣೆ ವ್ಯಾಪ್ತಿ ಘಟನೆ ಜರುಗಿದೆ.