ವಿಜಯಪುರದಲ್ಲಿ 31 ನೇ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಮ್ಮೇಳನ

ctd--ooooo5
Published on

ಚಿತ್ರದುರ್ಗ: ವಿಜಯಪುರದಲ್ಲಿ 2025ರ ಫೆಬ್ರವರಿ 22 ರಿಂದ ಎರಡು ದಿನಗಳ ಕಾಲ ನಡೆಯಲಿರುವ 31 ನೇ ಸರ್ಕಾರಿ ವೈದ್ಯಾಧಿಕಾರಿಗಳ ರಾಜ್ಯ ಸಮ್ಮೇಳನದ ಅಂಗವಾಗಿ, ಸಂಘಟನೆಯ ಪ್ರತಿನಿಧಿಗಳು ಗುರುವಾರ ನಗರದ ಜಿಲ್ಲಾಸ್ಪತ್ರೆಯಲ್ಲಿ ವೈದಾಧಿಕಾರಿಗಳಿಗೆ ಮಾಹಿತಿ ನೀಡಿದರು.

ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ, ವಿಜಯಪುರ ಜಿಲ್ಲಾ ಶಾಖೆಯೊಂದಿಗೆ ‘ಅನುಭಾವ-25, ಶರಣ ನಾಡಲ್ಲೊಂದು ವೈದ್ಯ ಸಂಗಮ’ ಶೀರ್ಷಿಕೆಯಡಿ ಸಮ್ಮೇಳನವನ್ನು ವಿಜಯಪುರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಏರ್ಪಡಿಸಲಾಗಿದೆ.

ಸಮ್ಮೇಳನದ ಪೂರ್ವಭಾವಿಯಾಗಿ ಜಿಲ್ಲೆಯ ಸರ್ಕಾರಿ ವೈದ್ಯಾಧಿಕಾರಿಗಳ ಸದಸ್ಯತ್ವ ನೋಂದಣಿಯನ್ನು ಈ ವೇಳೆ ಮಾಡಿಕೊಳ್ಳಲಾಯಿ ತು. ಜಿಲ್ಲಾಸ್ಪತ್ರೆ ಆರ್‌ಎಂಒ ಆನಂದಪ್ರಕಾಶ್, ವೈದ್ಯಾಧಿಕಾರಿಗಳಾದ ಡಾ.ಪ್ರಕಾಶ್, ಡಾ.ದೇವರಾಜ್, ಡಾ.ವಿಜಯ್‌ಕುಮಾರ್, ಡಾ.ಸತೀಶ್ ಆದಿಮನಿ, ವಿಜಯಪುರದ ಡಾ.ಆಕೀಬ್, ಡಾ.ಸಂಗಮೇಶ್, ಡಾ.ಮಂಜುನಾಥ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net