

ವಿಜಯಪುರ: ಮಹರ್ಷಿ ವಾಲ್ಮೆಕಿ ರಚಿಸಿದ ರಾಮಾಯಣ ದೇಶದ ಅತಿದೊಡ್ಡ ಮಹಾಕಾವ್ಯ. ಈ ಮಹಾಕಾವ್ಯದಲ್ಲಿ ಭಾರತ ದೇಶದ ಜೀವನ ಚರಿತ್ರೆ, ಸಂಸ್ಕೃತಿ ಅಡಗಿದೆ ಎಂದು ಮಹರ್ಷಿ ವಾಲ್ಮೆಕಿ ಸಂಘದ ಮುಖಂಡ ರವೀಶ್ ತಿಳಿಸಿದರು.
ವಿಜಯಪುರದ ಮಂಡಿಬೆಲೆ ರಸ್ತೆಯ ಶ್ರೀ ಮಹರ್ಷಿ ವಾಲ್ಮೆಕಿ ಉದ್ಯಾನವನದಲ್ಲಿ ಮಹರ್ಷಿ ವಾಲ್ಮೆಕಿ ಪುತ್ಥಳಿಗೆ ಮಹರ್ಷಿ ವಾಲ್ಮೆಕಿ ಸಂಘದಿಂದ ಪುಷ್ಪಾರ್ಚನೆ ಮಾಡಿ ಮಾತನಾಡಿದರು.
ಕಾರ್ಯದರ್ಶಿ ಪಾಂಡು ಮಾತನಾಡಿ, ರಾಮಾಯಣ ಇತಿಹಾಸವು ಇಂದಿಗೂ ಪಾಶ್ಚಾತ್ಯರ ದೃಷ್ಟಿಯಲ್ಲಿ ಆದರ್ಶ ಕಾವ್ಯವಾಗಿದೆ. ಪ್ರಪಂಚದಲ್ಲಿರುವ ಅನೇಕ ಭಾಷೆಗಳಲ್ಲಿ ರಾಮಾಯಣ ಗ್ರಂಥ ಹೊರಬಂದಿದೆ. ಹಾಗೂ ರಾಮಾಯಣವು ಭರತಖಂಡದಲ್ಲಿ ಜನ್ಮತಾಳಿದರೂ, ವಿಶ್ವಮಾನ್ಯತೆ ಪಡೆದಿದೆ ಎಂದರು.
ಸಂಘದ ಗೌರವಾಧ್ಯಕ್ಷ, ನಿವೃತ್ತ ಕೆಎಸ್‌ಆರ್‌ಟಿಸಿ ನೌಕರ ನಾರಾಯಣಸ್ವಾಮಿ ಮಾತನಾಡಿ, ರಾಮಾಯಣ ಮಹಾಕಾವ್ಯವು ಧಾರ್ಮಿಕ, ಸಾಮಾಜೀಕ ಸದ್ಗುಣಗಳನ್ನು ಪ್ರತಿಪಾದಿಸುವ ದಾರಿ ದೀಪವಾಗಿ, ಜ್ಞಾನದ ದಾರಿಯಾಗಿದೆ ಎಂದರು.
ವಾಲ್ಮಿಕಿ ಸಂಘದ ಟೌನ್ ಅಧ್ಯಕ್ಷ ಶ್ರೀರಾಮಪ್ಪ, ಎಲೆ ಮುನಿರಾಜು, ಕೆ.ಎಚ್.ಚಂದ್ರಶೇಖರ್, ಓಂ ಶಕ್ತಿ ಮುನಿಕೃಷ್ಣಪ್ಪ, ತಾಲೂಕು ಸಂಘದ ಅಧ್ಯಕ್ಷ ನಾಗೇಶ್, ಜೆಡಿಎಸ್ ಎಸ್‌ಟಿ ವಿಭಾಗದ ಅಧ್ಯಕ್ಷರಾದ ಮಾಳಿಗೇನಹಳ್ಳಿ ವೆಂಕಟೇಶ್ ಮೂರ್ತಿ, ಹನುಮಂತಪ್ಪ, ದೊಡ್ಡಚಿಮ್ಮನಹಳ್ಳಿ ದೇವರಾಜ್, ಮಹಂತಿನ ಮಠದ ಕಾರ್ಯದರ್ಶಿ ವಿ.ವಿಶ್ವನಾಥ್ ಇದ್ದರು.