ವಿಜಯಪುರ ವಿಮಾನ ನಿಲ್ದಾಣ ನನ್ನ ಮನಸ್ಸಿನ ತಕ್ಕ ಹಾಗಾಗಿಲ್ಲ: ಡಿಸಿಎಂ ಕಾರಜೋಳ

IMG-20210214-WA0047
Published on

ವಿಜಯಪುರ: ಐತಿಹಾಸಿಕ ಜಿಲ್ಲೆಯಲ್ಲಿ ಫೆ. 15 ರಂದು ಉದ್ಘಾಟನೆಗೊಳ್ಳಲಿರುವ ವಿಮಾನ ನಿಲ್ದಾಣ ಕಾಮಗಾರಿ ನನ್ನ ಮನಸ್ಸಿಗೆ ತಕ್ಕ ಹಾಗಿಲ್ಲ ಎಂದು ಡಿಸಿಎಂ ಗೋವಿಂದ ಕಾರಜೋಳ ಅಭಿಪ್ರಾಯಿಸಿದ್ದಾರೆ.

ನನ್ನ ಉದ್ದೇಶ ಮುಳವಾಡ ಬಳಿ ವಿಮಾನ ನಿಲ್ದಾಣ ಆಗಬೇಕೆಂದಿತ್ತು. ಆದರೆ ಕೆಲವರು ಮುಳವಾಡ ಬಳಿ ಕಾರಜೋಳ ಅವರ ಹೊಲ ಇದ್ದು ಅದರ ದರ ಹೆಚ್ಚಿಸಿಕೊಳ್ಳಲು ಈ ರೀತಿ ಮಾಡುತ್ತಿದ್ದಾರೆ ಎಂದು ಟೀಕೆ ಟಿಪ್ಪಣೆ ಮಾಡಿದರು. ಹೀಗಾಗಿ ನಾನು ಸುಮ್ಮನಾದೆ. ಆದರೆ ಭವಿಷ್ಯದಲ್ಲಿ ಸದರಿ ಜಾಗೆಯಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆಗಲಿದೆ ಎಂಬುದು ಗಮನಕ್ಕಿರಲಿ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮುಳವಾಡ ಬಳಿ 2500 ಎಕರೆ ಸರ್ಕಾರದ‌ ಜಾಗೆ ಇದೆ. ವಿಮಾನ ನಿಲ್ದಾಣಕ್ಕೆ ಬೇಕಾದ ಎಲ್ಲ ಸೌಕರ್ಯಗಳನ್ನು ಅಲ್ಲಿ ಕಲ್ಪಿಸಬಹುದಿತ್ತು ಎಂದರು.

ತೋಟಗಾರಿಕೆಗೆ ಜಿಲ್ಲೆ ಹೆಸರಾಗಿದೆ. ಔದ್ಯೋಗಿಕ ಬೆಳವಣಿಗೆ ಆದ ಹಾಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆಗಲಿದೆ. ಆಲಮಟ್ಟಿ ಅಣೆಕಟ್ಟೆ ಎತ್ತರ ಹೆಚ್ಚಿಸಿದರೆ ನಮಗೆ ಹಂಚಿಕೆಯಾದ ನೀರು ಸಮರ್ಪಕ ವಾಗಿ ಸಿಗಲಿದೆ. ಇದು ರಾಷ್ಟ್ರೀಯ ಯೋಜನೆಯಾಗಬೇಕೆಂಬುದು ಸಹ ಇದ್ದು ಅದಕ್ಕೆ ನಮ್ಮದೂ ಒತ್ತಡ ಇದೆ. ನೀರಾವರಿ ಸಮೃದ್ದವಾದಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣವಾಗುವುದರಲ್ಲಿ ಸಂಶಯವಿಲ್ಲ ಎಂದರು.

ಶಾಸಕ ಸೋಮನಗೌಡ ಪಾಟೀಲ ಸಾಸನೂರ,

ಮುಖಂಡರಾದ ವಿಜುಗೌಡ ಪಾಟೀಲ, ಅಪ್ಪಾಸಾಹೇಬ ಪಟ್ಟಣಶೆಟ್ಟಿ, ದಯಾಸಾಗರ ಪಾಟೀಲ, ಆರ್.ಎಸ್. ಪಾಟೀಲ ಕೂಚಬಾಳ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net