ವಿಜಯಪುರ ಪೊಲೀಸರ ಭರ್ಜರಿ ಕಾರ್ಯಾಚರಣೆ, ನಾಲ್ವರು ಆರೋಪಿಗಳ ಬಂಧನ, ಎರಡು ಲಾರಿ.. 13 ಬೈಕ್ ವಶ

IMG-20210415-WA0060
Published on

ವಿಜಯಪುರ: ಎರಡು ಲಾರಿ, 13 ಬೈಕ್ ಜೊತೆಗೆ ನಾಲ್ವರು ಕಳ್ಳರನ್ನು ಬಂಧಿಸುವ ಮೂಲಕ ವಿಜಯಪುರ ಪೊಲೀಸರು ಕಾರ್ಯಾಚರಣೆ ಯಶಸ್ವಿಗೊಳಿಸಿದ್ದಾರೆಂದು ಎಸ್ ಪಿ ಅನುಪಮ್ ಅಗರವಾಲ ತಿಳಿಸಿದರು.

ನಗರದ ಅಸಾರಗಲ್ಲಿ ನಿವಾಸಿ ಮಹಿಬೂಬ್ ಹುಸೇನ ಹವಾಲ್ದಾರ್ ಹಾಗೂ ಕಲಬುರಗಿ ಜಿಲ್ಲೆಯ ಬಸವೇಶ್ವರ ಕಾಲೋನಿ ನಿವಾಸಿ ಮೊಹಮ್ಮದ್ ಆಸೀಫ್ ಶೇಖ್ ಬಂಧಿತರು. ಇನ್ನು ಬಂಧಿತರಿಂದ 7 ಲಕ್ಷ 25 ಸಾವಿರ ಮೌಲ್ಯದ ಎರಡು ಲಾರಿ ಜಫ್ತು ಮಾಡಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ಅಲ್ಲದೇ, ಜಿಲ್ಲಾದ್ಯಂತ ಬೈಕ್ ಕಳ್ಳತನ ಮಾಡುತ್ತಿದ್ದ ಇಬ್ಬರು ಬೈಕ್ ಗಳ್ಳರನ್ನು ಬಂಧಿಸಿ ಅವರಿಂದ 7 ಲಕ್ಷ 50 ಸಾವಿರ ಮೌಲ್ಯದ ಒಟ್ಟು 13 ಬೈಕ್ ಗಳನ್ನು ಗೋಳಗುಮ್ಮಟ್ ಪೊಲೀಸರು ಜಫ್ತು ಮಾಡಿದ್ದಾರೆ ಎಂದರು.

ಜಿಲ್ಲಾದ್ಯಂತ ವಿವಿಧ ಕಡೆಗೆ ಬೈಕ್ ಕಳ್ಳತನ ಮಾಡುತ್ತಿದ್ದ ಗಾಂಧಿ ಸದಾಶಿವ ಎಮ್ಮೆ ಹಾಗೂ ಗಂಗಾಧರ ತುಕಾರಾಮ್ ಬಗಲಿ ಬಂಧಿತ ಆರೋಪಿಗಳು ಎಂದರು.

ಇನ್ನು ಇದೇ ವೇಳೆ ಗೋಳಗುಮ್ಮಟ ಪೊಲೀಸರ ಕಾರ್ಯ ಹಾಗೂ ಪ್ರಾಮಾಣಿಕತೆಗೆ ಮೆಚ್ಚುಗೆ ವ್ಯಕ್ತಪಡಿಸಿ ಎಸ್ಪಿ ಅಗರವಾಲ್ ಪ್ರಶಸ್ತಿ ಪ್ರದಾನ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net