ಕಾಂಗ್ರೆಸ್ ಜಿಲ್ಲಾ ಟಾಸ್ಕ್‌ಫೋರ್ಸ್ ಸಮಿತಿ ಉದ್ಘಾಟನೆ

VMS 4-4
Published on

ವಿಜಯಪುರ: ಕರೊನಾ ವೈರಸ್ ನಿರ್ಮೂಲನೆ ಹಾಗೂ ಜನಜಾಗೃತಿಗಾಗಿ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಟಾಸ್ಕ್‌ಫೋರ್ಸ್ ಹಾಗೂ ಹೆಲ್ಪ್‌ಲೈನ್ ಸಮತಿಯನ್ನು ಶನಿವಾರ ಉದ್ಘಾಟಿಸಲಾಯಿತು.
ಜಿಲ್ಲಾಧ್ಯಕ್ಷ ಪ್ರೊ.ರಾಜು ಆಲಗೂರ ಮಾತನಾಡಿ, ದೇಶದಲ್ಲಿ ಕರೊನಾದಿಂದ ಜನ ತತ್ತರಿಸಿದ್ದಾರೆ. ಈ ಮಹಾಮಾರಿ ಓಡಿಸಲೂ ಎಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಮನೆಯಲ್ಲಿದ್ದು ಸಹಕರಿಸಬೇಕು ಎಂದರು. ಟಾಸ್ಕ್‌ಫೋರ್ಸ್ ಸಮಿತಿ ಜಿಲ್ಲಾಧ್ಯಕ್ಷ ಮಹ್ಮದ್‌ರಫೀಕ್ ಟಪಾಲ್ ಮಾತನಾಡಿದರು.

ಮುಖಂಡರಾದ ಅಬ್ದುಲ್‌ಹಮೀದ್ ಮುಶ್ರಿಫ್, ಜಮೀರ್‌ಅಹ್ಮದ್ ಭಕ್ಷಿ, ಆರತಿ ಶಹಾಪುರ, ಎಸ್.ಎಂ.ಪಾಟೀಲ(ಗಣಿಯಾರ), ಸಜ್ಜಾದೇಪೀರಾ ಮುಶ್ರಿಫ್, ಶಬ್ಬೀರ್ ಜಾಗೀರದಾರ್, ವಸಂತ ಹೊನಮೊಡೆ, ಅಬ್ದುಲ್‌ಖಾದರ್, ಸಾಹೇಬಗೌಡ ಬಿರಾದಾರ, ಐ.ಎಂ. ಇಂಡಿಕರ್, ಪರವೇಜ್ ಚಟ್ಟರಕಿ, ಸಮದ್ ಸುತಾರ್, ಚನ್ನಬಸಪ್ಪ ನಂದರಗಿ, ಮಲ್ಲು ತೊರವಿ, ರವೀಂದ್ರ ಜಾಧವ, ಇಲಿಯಾಸ್ ಬಕ್ಷಿ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net