ವಿಜಯಪುರ ಉತ್ಸವ ಯಶಸ್ಸಿಗೆ ಕೈ ಜೋಡಿಸಿ

13-07kodekal02
Published on

ಕೊಡೇಕಲ್: ವಿಜಯಪುರದಲ್ಲಿ ಜು.೧೮ರಿಂದ ೨೦ರ ವರೆಗೆ ನಡೆಯಲಿರುವ ಉತ್ತರ ಕರ್ನಾಟಕ ಶಾಮಿಯಾನ ಸಪ್ಲಾರ‍್ಸ್ ಹಾಗೂ ಡೆಕೊರೇಟ್ ಸಂಘದ ಮಹಾಸಭೆ ಮತ್ತು ವಿಜಯಪುರ ಉತ್ಸವ ಯಶಸ್ಸಿಗೆ ಎಲ್ಲರೂ ಸಹಕಾರ ನೀಡಬೇಕು ಎಂದು ಹುಣಸಗಿ ತಾಲೂಕು ಅಧ್ಯಕ್ಷ ಶೇಖ್ ಅಹ್ಮದ ನಾರಾಯಣಪುರ ಮನವಿ ಮಾಡಿದರು.

ತಾಲೂಕಿನ ಶಾಮಿಯಾನಾ ಸಪ್ಲಾರ‍್ಸ್ ಮತ್ತು ಲೈಟಿಂಗ್ ಹಾಗೂ ಧ್ವನಿವರ್ಧಕ ಸಂಘದಿAದ ಗ್ರಾಮದ ಪ್ಯಾಟಿ ಬಸವೇಶ್ವರ ದೇವಸ್ಥಾನದಲ್ಲಿ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ೧೮ರಿಂದ ಮೂರು ದಿನಗಳ ಕಾಲ ವಿಜಯಪುರದಲ್ಲಿ ಸಂಘದ ೪ನೇ ವರ್ಷದ ಮಹಾಸಭೆ ಆಯೋಜಿಸಲಾಗಿದ್ದು, ಉತ್ತರ ಕರ್ನಾಟಕದ ಎಲ್ಲ ಜಿಲ್ಲೆಗಳ ಶಾಮಿಯಾನ ಸಪ್ಲಾರ‍್ಸ್ ಮತ್ತು ಡೆಕೊರೇಟ್‌ಗಳು ಸೇರಿ ವಿಜಯಪುರ ಉತ್ಸವದಲ್ಲಿ ಕರ‍್ಯಕ್ರಮ ಹಮ್ಮಿಕೊಂಡಿದ್ದಾರೆ. ಈ ಒಂದು ಮಹಾಸಭೆಯಲ್ಲಿ ನಮ್ಮ ಕುಂದುಕೊರತೆಗಳ ಚರ್ಚೆ ಹಾಗೂ ಸಮಸ್ಯೆಗಳ ಪರಿಹಾರಗಳು ಕೂಡ ಸಿಗಲಿವೆ ಎಂದರು.

೧೮ರAದು ಶುಕ್ರವಾರ ಬೆಳಗ್ಗೆ ೧೧ಕ್ಕೆ ಆರಂಭವಾಗುವ ಮಹಾಸಭೆ ವಿಜಯಪುರ ಜ್ಞಾನಯೋಗಶ್ರಮದ ಪೂಜ್ಯರು , ಗೋಳಸಾರ ಮಠದ ಪೂಜ್ಯರ ಸಾನ್ನಿಧ್ಯದಲ್ಲಿ ಕರ‍್ಯಕ್ರಮ ನಡೆಯಲಿದೆ. ಹೀಗಾಗಿ ತಾಲೂಕಿನ ತಾಲೂಕಿನ ಎಲ್ಲ ಶಾಮಿಯಾನ ಮತ್ತು ಡೆಕೊರೇಟ್‌ಗಳ ಮಾಲೀಕರು ಸೇರಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕರ‍್ಯಕ್ರಮ ಯಶಸ್ಸುಗೊಳಿಸಬೇಕು ಎಂದು ಮನವಿ ಮಾಡಿದರು.

ತಿರುಪತಿ ಸುರಪುರ, ಗುರು ಡಂಬಳ, ಪರಶುರಾಮ ಬರದೇವನಾಳ, ಶಂಕರ ಧನ್ನೂರ ಕೊಡೇಕಲ್, ಪವನ, ಅಯ್ಯಪ್ಪ ಕೊಡೇಕಲ್, ಉಮೇಶ ಕುಂಬಾರ, ಸಂಗಮೇಶ ಗೆದ್ದಲಮರಿ, ರಮೇಶ ಗುತ್ತೇದಾರ್, ಸುಭಾಷ್ ನಾರಾಯಣಪುರ, ಧೀರುನಾಯ್ಕ್, ಬಸಣ್ಣ, ಸೋಮಣ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net