ವಿಜಯನಗರದಲ್ಲಿ ಮೋದಿ ಕಾರ್ಯಕ್ರಮಕ್ಕೆ ಕ್ಷಣಗಣನೆ

IMG-20230502-WA0009.jpg
Published on

ಹೊಸಪೇಟೆ: ಐತಿಹಾಸಿಕ ಸ್ಮಾರಕಗಳ ನಾಡು ವಿಜಯನಗರ ಜಿಲ್ಲೆಯ ಹೊಸಪೇಟೆಗೆ ಪ್ರಧಾನಿ ನರೇಂದ್ರ ಮೋದಿ ಆಗಮನಕ್ಕೆ ಕ್ಷಣಗಣನೆ ಶುರುವಾಗಿದೆ.
ಜಿಲ್ಲಾ ಬಿಜೆಪಿಯಿಂದ ನಗರದ ಡಾ. ಪುನೀತ್ ರಾಜ್‌ಕುಮಾರ್ ಜಿಲ್ಲಾ ಕ್ರೀಡಾಂಗಣದಲ್ಲಿ ವಿಧಾನಸಭಾ ಚುನಾವಣೆ ನಿಮಿತ್ತ ಆಯೋಜಿರುವ ನವ ಕರ್ನಾಟಕ ಸಂಕಲ್ಪ ಸಮಾವೇಶದಲ್ಲಿ ಪ್ರಧಾನಿ‌ ಮೋದಿ ಪಾಲ್ಗೊಳ್ಳಲಿರಿವ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಸೇರಿದಂತೆ ಲಕ್ಷಾಂತರ ಜನರು ಹರಿದು ಬರುತ್ತಿದ್ದಾರೆ.
ವಿಜಯನಗರ ಜಿಲ್ಲೆಯ ಐದು ಹಾಗೂ ಕೊಪ್ಪಳ ಜಿಲ್ಲೆಯ ಮೂರು ಸೇರಿದಂತೆ ಎಂಟು ಕ್ಷೇತ್ರಗಳ ಅಭ್ಯರ್ಥಿಗಳ ಪರ ಮತ ಯಾಚಿಸಲಿದ್ದಾರೆ.
ಬಳ್ಳಾರಿ ಸಂಸದ ವೈ.ದೇವೇಂದ್ರಪ್ಪ, ಕೊಪ್ಪಳ ಸಂಸದ ಕರಡಿ ಸಂಗಣ್ಣ, ಸಚಿವರಾದ ಆನಂದ ಸಿಂಗ್, ಹಾಲಪ್ಪ ಆಚಾರ್, ಹರಪನಹಳ್ಳಿ ಅಭ್ಯರ್ಥಿ ಜಿ.ಕರುಣಾಕರ‌ ರೆಡ್ಡಿ, ಗಂಗಾವತಿ ಕ್ಷೇತ್ರದ ಪರಣ್ಣ ಮುನವಳ್ಳಿ, ವಿಜಯನಗರ ಕ್ಷೇತ್ರದ ಸಿದ್ದಾರ್ಥ‌ ಸಿಂಗ್, ಹಗರಿಬೊಮ್ಮನಹಳ್ಳಿ ಕ್ಷೇತ್ರದ ಬಲ್ಲಾಹುಣ್ಸಿ ರಾಮಣ್ಣ, ಹಡಗಲಿ ಕ್ಷೇತ್ರದ ಕೃಷ್ಣಾ ನಾಯ್ಕ, ಕೊಪ್ಪಳ ಕ್ಷೇತ್ರದ ಮಂಜುಳಾ ಕರಡಿ, ಕೂಡ್ಲಿಗಿ ಕ್ಷೇತ್ರದ ಲೋಕೇಶ್ ನಾಯಕ್, ಮಾಜಿ ಸಚಿವ ಆನಂದ್‌ ಸಿಂಗ್,  ಪರಿಷತ್ತಿನ ಸದಸ್ಯೆ ಹೇಮಲತಾ ನಾಯಕ್, ವಿಜಯನಗರ ಬಿಜೆಪಿ ಜಿಲ್ಲಾಧ್ಯಕ್ಷ ಚನ್ನಬಸವನಗೌಡ‌   ಕಾರ್ಯಕ್ರಮದ ಉಸ್ತುವಾರಿ ಸಿದ್ದೇಶ ಯಾದವ್, ಬಿಜೆಪಿ ಮುಖಂಡರಾದ
ಗಿರೇಗೌಡ, ಪ್ರಭುದೇವ ಕಪ್ಪಗಲ್,
ಗೋ. ಮಧುಸೂಧನ್ ಪ್ರಧಾನಿ ಜತೆ ವೇದಿಕೆ ಹಂಚಿಕೊಳ್ಳಲಿದ್ದಾರೆ.

ಮೋದಿ ಮೂಮೆಂಟ್
ಮಧ್ಯಾಹ್ನ 12.45 ಕ್ಕೆ ಹೊಸಪೇಟೆಯ ಭಟ್ರಳ್ಳಿ ಆಂಜನೇಯ ದೇಗುಲದ ಬಳಿಯ ಹೆಲಿಪ್ಯಾಡ್ ನಿಂದ ರಸ್ತೆ ಮಾರ್ಗವಾಗಿ ಸಮಾವೇಶದ ಸ್ಥಳಕ್ಕೆ ಆಗಮಿಸುವರು.  2 ಗಂಟೆಗೆ  ಹೊಸಪೇಟೆಯಿಂದ ಹೆಲಿಕಾಪ್ಟರ್ ನಲ್ಲಿ ಸಿಂಧನೂರು ಪಟ್ಟಣಕ್ಕೆ ಪ್ರಯಾಣಿಸುವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net