ವಿಜಯನಗರ ಡಿಸಿಯಾಗಿ ಜಿಪಂ ಸಿಒಇ ದಿವಾಕರ

CTD 8CE O M.S.DIVAKAR--08
Published on

ಚಿತ್ರದುರ್ಗ: ಜಿಪಂ ಸಿಇಒ ಆಗಿ ಕಳೆದ ಅಕ್ಟೋಬರ್ 27ರಂದು ಅಧಿಕಾರ ಸ್ವೀಕರಿಸಿದ್ದ ಎಂ.ಎಸ್.ದಿವಾಕರ ಅವರನ್ನು ವಿಜಯನಗರ ಜಿಲ್ಲಾಧಿಕಾರಿ ಯನ್ನಾಗಿ ವರ್ಗಾಯಿಸಿ ರಾಜ್ಯಸರ್ಕಾರ ಸೋಮವಾರ ಆದೇಶಿಸಿದೆ.

ದಾವಣಗೆರೆ ಜಿಲ್ಲೆ ಗಂಗನಕಟ್ಟೆ ಗ್ರಾಮದ ದಿವಾಕರ್ ಅವರು ಧಾರವಾಡ ಕೃಷಿ ವಿವಿಯಲ್ಲಿ ಬಿಎಸ್ಸಿ ಕೃಷಿ ಪದವಿ ಬಂಗಾರದ ಪದಕ ಪಡೆ ದವರು. ಅಲ್ಲಿ ಎಂಎಸ್ ಸ್ನಾತಕೋತ್ತರ ಪದವಿ ಬಳಿಕ ಸಾಗರದ ಕೃಷಿ ಇಲಾಖೆಯಲ್ಲಿ ಸಹಾಯಕ ನಿರ್ದೇಶಕರಾಗಿ 2002ರಿಂದ 2006ರವ ರೆಗೆ ಸೇವೆ ಸಲ್ಲಿಸಿದ್ದರು.

ಆನಂತರ ಬಳ್ಳಾರಿಯಲ್ಲಿ ಇಲಾಖೆಯ ಉಪ ನಿರ್ದೇಶಕ 5 ವರ್ಷ,ಬೆಳಗಾವಿಯಲ್ಲಿ 5 ವರ್ಷ ಜಂಟಿ ನಿರ್ದೇಶಕರಾಗಿ ಹಾಗೂ ಬೆಂಗ ಳೂರಲ್ಲಿ ಇಲಾಖೆಯ ಹೆಚ್ಚುವರಿ ನಿರ್ದೇಶಕರಾಗಿ 4 ವರ್ಷ ಸೇವೆ ಸಲ್ಲಿಸಿದ್ದ ದಿವಾಕರ ಅವರು,ಚಿತ್ರದುರ್ಗ ಜಿಪಂಕ್ಕೆ ಮೊದಲ ಬಾರಿಗೆ ಸಿಇ ಒವಾಗಿ ನೇಮಕವಾಗಿದ್ದರು. ಸಿಇಒ ಆದ ಬಳಿಕ ಮನೆ ಬಾಗಿಲಿಗೆ ಇ-ಸ್ವತ್ತು ಎಂಬ ಕಾರ‌್ಯಕ್ರಮ ರಾಜ್ಯದಲ್ಲೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ಜಾರಿಗೊಳಿಸುವ ಮೂಲಕ ಗಮನ ಸೆಳೆದಿದ್ದರು.

(ಸಿಟಿಡಿ 17 ಎಂ.ಎಸ್.ದಿವಾಕರ್)ಮಗ್‌ಶಾಟ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net