ವಿಜಯನಗರ ಜಿಲ್ಲೆ ಸಂಬಂಧಿಸಿದಂತೆ ಮತ್ತೊಂದು ಸಭೆ: ಡಿಸಿಎಂ ಲಕ್ಷ್ಮಣ ಸವದಿ ಹೇಳಿಕೆ

Laxman Savadi
Published on

ಬಳ್ಳಾರಿ: ವಿಜಯನಗರ ಜಿಲ್ಲೆ ರಚನೆ ಸಂಬಂಧಿಸಿದಂತೆ ಒಂದು ಸಭೆ ನಡೆದಿದ್ದು, ಪರ, ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿವೆ. ಸಂಪುಟ ವಿಸ್ತರಣೆ ಬಳಿಕ ಸಚಿವ, ಶಾಸಕ, ಸಂಘ-ಸಂಸ್ಥೆ ಪ್ರತಿನಿಧಿಗಳ ಮತ್ತೊಂದು ಸಭೆ ಕರೆದು ವಿಜಯನಗರ ಜಿಲ್ಲೆ ರಚನೆಗೆ ಸಿಎಂ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಡಿಸಿಎಂ, ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ.

ಸಂಪುಟ ವಿಸ್ತರಣೆಯಾಗಲಿದ್ದು, ಯಾರಿಗೆ ಸಚಿವ ಸ್ಥಾನ ಕೊಡಬೇಕು ಎಂಬುದನ್ನು ಸಿಎಂ ಬಿಎಸ್ ವೈ ನಿರ್ಧರಿಸಲಿದ್ದಾರೆ ಎಂದು ಭಾನುವಾರ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಧ್ವಜಾರೋಹಣ ನೆರವೇರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಡಿಸೈಲ್ ಮತ್ತು ಪೆಟ್ರೋಲ್ ದರ ಹೆಚ್ಚಾಗುತ್ತಿರುವುದರಿಂದ ಸಾರಿಗೆ ಇಲಾಖೆಗಳ ನಿಗಮಗಳು ನಷ್ಟದಲ್ಲಿವೆ.ಆದರೂ ಟಿಕೇಟ್ ದರ ಹೆಚ್ಚಳ ಮಾಡುವ ಪ್ರಸ್ಥಾಪ ನಮ್ಮ ಮುಂದಿಲ್ಲ. ಪರ್ಯಾಯವಾಗಿ ಆದಾಯ ವೃದ್ಧಿಗೆ ಕ್ರಮ ಕೈಗೊಳ್ಳಲಿದ್ದೇವೆ.

ಹೊರ ರಾಜ್ಯಕ್ಕೆ ಹೋಗಿ ಇಲ್ಲಿನ ಖಾಸಗಿ ಬಸ್ ಗಳು ನೋಂದಣೆ ಮಾಡಿಸಿಕೊಂಡಿರುವುದರಿಂದ ತೆರಿಗೆ ಸಂಗ್ರಹ ಕಡಿಮೆಯಾಗಿದೆ.ಒಟ್ಟಾರೆ ತೆರಿಗೆ ಸಂಗ್ರಹದಲ್ಲಿ ಸಾರಿಗೆ ಇಲಾಖೆ ೪ನೇ ಸ್ಥಾನದಲ್ಲಿದೆ.ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು.

ಹಲವು ಕಂಪನಿಗಳು ಎಲೆಕ್ಟ್ರಾನಿಕ್ ಬಸ್ ಸೇವೆ ಒದಗಿಸುವುದಾಗಿ ಮುಂದೆ ಬಂದಿದ್ದು, ಅವುಗಳ ನಿರ್ವಹಣೆ ಕೈಗೊಂಡರೇ ಬರುವ ಲಾಭದಲ್ಲಿ ಶೇ.40 ರಷ್ಡು ಲಾಭ ಕೊಡಬೇಕೆಂದು ಬೇಡಿಕೆ ಇರಿಸಿವೆ.ಈ ಕುರಿತು ಇಲಾಖೆ ಜತೆ ಸಭೆ ನಡೆಸಿ ತಿರ್ಮಾನ ಕೈಗೊಳ್ಳಲಾಗುವುದು ಎಂದರು.

ಚಾಲಕರು, ನಿರ್ವಾಹಕರು ಕಾಯಂತಿ ಮಾಡಲು ಸಿಎಂ ಸಮಿತಿಗೆ ರಚನೆ ಸೂಚನೆ ನೀಡಿದ್ದಾರೆ.ಸಮಿತಿ ನೀಡುವ ವರದಿ ಆಧಾರದ ಮೇಲೆ ನೌಕರರ ಕಾಯಂತಿ ನಿರ್ಣಯವಾಗಲಿದೆ.ಆಂಧ್ರದ ಗಡಿ ಭಾಗದಲ್ಲಿರುವ ಕನ್ನಡ ಶಾಲೆಗಳನ್ನು ಯಾವುದೇ ಕಾರಣಕ್ಕೂ ಇಂಗ್ಲೀಷ್ ಮಾಧ್ಯಮಕ್ಕೆ ಪರಿವರ್ತಿಸಿದಂತೆ ಆಂಧ್ರ ಸರ್ಕಾರದೊಂದಿಗೆ ಮಾತನಾಡುವಂತೆ ಶಿಕ್ಷಣ ಸಚಿವ ಸುರೇಶ ಕುಮಾರರ ಬಳಿ ಖುದ್ದಾಗಿ ಮನವಿ ಮಾಡಿಕೊಳ್ಳುವೆ ಎಂದರು.

ನಗರ ಶಾಸಕ ಜಿ.ಸೋಮಶೇಖರರಡ್ಡಿ, ಸಂಸದ ವೈ.ದೇವೇಂದ್ರಪ್ಪ, ಡಿಸಿ ಎಸ್.ಎಸ್.ನಕುಲ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net