ವಿಜಯನಗರ ಕಾಲುವೆ ಅಭಿವೃದ್ಧಿಪಡಿಸಿ

20 KAMPLI 02
Published on

ಕಂಪ್ಲಿ: ಸಣಾಪುರ ಗ್ರಾಪಂ.ಕಚೇರಿ ಬಳಿಯ ಕಿರು ಸೇತುವೆಯಿಂದ ವಿಜಯನಗರ ಕಾಲುವೆಯ ಕೆಳಭಾಗವನ್ನು ಅಭಿವೃದ್ಧಿಪಡಿಸುವಂತೆ ನಂ.3 ಸಣಾಪುರದ ರೈತರು ಒತ್ತಾಯಿಸಿದ್ದಾರೆ.

ವಿಜಯನಗರ ಕಾಲುವೆ ಅಭಿವೃದ್ಧಿಪಡಿಸುವಾಗ ನಂ.3 ಸಣಾಪುರ ಗ್ರಾಪಂ.ಕಚೇರಿ ಬಳಿಯ ಕಿರುಸೇತುವೆಯಿಂದ ಕಾಲುವೆ ಕೆಳಭಾಗದ ಸುಮಾರು 30 ಮೀ. ಅಭಿವೃದ್ಧಿಗೊಳಿಸಿಲ್ಲ. ಇದರಿಂದ ಕಾಲುವೆ ನೀರು ರಸ್ತೆಗೆ ಹರಿಯುತ್ತಿದೆ. ನಾಲೆ ಕೊನೆಯ ಭಾಗದ ರೈತರಿಗೆ ನೀರು ತಲುಪುತ್ತಿಲ್ಲ.

ನೀರು ಸೋರಿಕೆಯಿಂದಾಗಿ ರಸ್ತೆ ಕೆಟ್ಟುಹೋಗಿದ್ದು ಕೃಷಿ ಚಟುವಟಿಕೆಗೆ ಬಿತ್ತನೆಬೀಜ, ರಸಗೊಬ್ಬರ, ಇತರ ಕೃಷಿ ಪರಿಕರಗಳನ್ನು ಸಾಗಿಸಲು ಹಾಗೂ ಜನರ ಸಂಚಾರಕ್ಕೆ ತೊಂದರೆಯಾಗಿದೆ. ಇದಕ್ಕಾಗಿ ಸುಮಾರು ಮೂರು ಕಿ.ಮೀ. ಸುತ್ತುವರಿದು ಸಂಚರಿಸಬೇಕಿದೆ. ಕಾಲುವೆ ಬಳಿ ನೀರು ಹರಿದು ಹೋಗಲು ಪೈಪ್ ಹಾಕಿದ್ದು ಸಮರ್ಪಕವಾಗಿಲ್ಲ. ಇದರ ಬದಲಿಗೆ ಸೇತುವೆ ನಿರ್ಮಿಸಬೇಕು.

ಈ ಕುರಿತು ನೀರಾವರಿ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಪ್ರಯೋಜವಿಲ್ಲದಂತಾಗಿದೆ. ಕೂಡಲೇ ವಿಜಯನಗರ ಕಾಲುವೆಯ ಉಳಿದ ಭಾಗವನ್ನು ಅಭಿವೃದ್ಧಿಗೊಳಿಸಬೇಕು ಎಂದು ರೈತರಾದ ಕನಕಗಿರಿ ರೇಣುಕಪ್ಪ, ಒಂಟಿ ನಾಗರಾಜ, ಮಂಜುನಾಥ ಗೌಡ, ರಾಜಕುಮಾರ್ ಪಾಟೀಲ್, ಎಂ.ವೀರೇಶ, ಒಂಟಿ ಚಾಗಪ್ಪ ಸೇರಿ ಇತರರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net