

ಕಲಬುರಗಿ: ಇಲ್ಲಿನ ಡಿವೈಎಸ್‌ಪಿ ಹುz್ದೆಗೆ ನಿಯೋಜನೆಗೊಂಡಿರುವ ವಿಜಯಕ್ರಾಂತಿ ಅವರಿಗೆ ಕರ್ತವ್ಯ ಹಾಜರಾಗಲು ನಿಜಕ್ಕೂ ಅಡ್ಡಿಪಡಿಸಲಾಗಿದೆಯೇ?, ಆಗಿದ್ದರೆ ಯಾರಿಂದ? ಎಂಬ ಪ್ರಶ್ನೆ ಉದ್ಬವವಾಗಿದೆ. ಅವಿಭಜಿತ ಕಲಬುರಗಿ ಜಿಲ್ಲೆಯವರಾದ ಡಿವೈಎಸ್ಪಿ ವಿಜಯಕ್ರಾಂತಿ ಮೊದಲ ಪೋಸ್ಟಿಂಗ್ ರಾಜಕೀಯ ಹಾಗೂ ಸಾರ್ವಜನಿಕ ವಲಯದಲ್ಲಿ ಗರ್ಮಾಗರಂ ಚರ್ಚೆ ನಡೆದಿದೆ. ಇಷ್ಟಕ್ಕೂ ಅಸಲಿಯತ್ತು ಏನು ಎಂಬುದು ಜನಸಾಮಾನ್ಯರ ಪ್ರಶ್ನೆ.
ಇದಕ್ಕೆ ಸ್ಥಳೀಯ ಶಾಸಕರು ಕಾರಣ ಎಂದು ಬಿಜೆಪಿ ಆರೋಪಿಸಿದೆ. ಅದರ ಬೆನ್ನಲ್ಲಿಯೇ ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ ಆರೋಪ ಅಲ್ಲಗಳಿದಿz್ದÁರೆ. ಹಾಗಾದರೆ, ವಿಜಯಕ್ರಾಂತಿಗೆ ಅಡ್ಡಿ ಪಡಿಸಿದವರು ಯಾರು? ಎಂಬ ಪ್ರಶ್ನೆ ಕಲಬುರಗಿ ಮತ್ತು ಯಾದಗಿರಿಯಲ್ಲಿ ಬಹು ಚರ್ಚಿತವಾಗಿದೆ.
ಇಲ್ಲಿದ್ದ ಡಿವೈಎಸ್‌ಪಿ ಅರುಣಕುಮಾರ ಎರಡು ವಾರಗಳ ಹಿಂದೆ ಸೇವೆಯಿಂದ ನಿವೃತ್ತಿ ಹೊಂದಿದ್ದರು. ಅವರ ಜಾಗಕ್ಕೆ ಜೇವರ್ಗಿ ತಾಲೂಕಿನ ವಿಜಯಕ್ರಾಂತಿ ಎಂಬ ಮಹಿಳಾ ಅಧಿಕಾರಿಯನ್ನು ನಿಯೋಜಿಸಿ ಜೂ.೩೦ರಂದೇ ಸರ್ಕಾರ ಆದೇಶ ಹೊರಡಿಸಿದೆ. ಆದರೆ, ಅವರು ಇದುವರೆಗೂ ಅಧಿಕಾರ ವಹಿಸಿಕೊಂಡಿಲ್ಲ. ಅದೇ ಈಗ ವಿವಾದಕ್ಕೆ ಕಾರಣವಾಗಿದೆ. ಈ ನಡುವೆ ಜಿ¯್ಲÁ ಪೊಲೀಸ್ ಇಲಾಖೆ ಮತ್ತು ನಗರ ಶಾಸಕರ ನಡುವೆ ಅದು ಅಂತಹ ಏನು ನಂಟು ಇದೆಯೋ? ಕಳೆದ ಒಂದು ವರ್ಷದಿಂದಲೂ ಒಂದಲ್ಲ ಒಂದು ವಿವಾದ ಹುಟ್ಟುತ್ತಲಿವೆ. ಕಳೆದ ವರ್ಷ ಪಿಎಸ್‌ಐ ಪರಶುರಾಮ್ ಸಾವಿನ ಘಟನೆ ರಾಜ್ಯದ ಗಮನ ಸೆಳೆದಿತ್ತು. ಕೊನೆಗೆ ಸಿಐಡಿ ತನಿಖೆ ನಡೆದು ಅಂತ್ಯಕAಡಿತು. ಅದು ಜನರು ಮರೆಯುವ ಮುನ್ನವೇ ಮತ್ತೆ ಅದೇ ಇಲಾಖೆ ಅಧಿಕಾರಿ ಮತ್ತು ಶಾಸಕರ ಸುತ್ತ ಮತ್ತೊಂದು ವಿವಾದ ಬಿಜೆಪಿಯಿಂದ ಬಹಿರಂಗಗೊAಡಿದೆ.
ಆರೋಪಕ್ಕೆ ಶಾಸಕರು ಸ್ಪಷ್ಟನೆ ನೀಡಿದ್ದಾರೆ. ಆದರೆ, ಇದುವರೆಗೂ ಈಶಾನ್ಯ ವಲಯದ ಹಿರಿಯ ಅಧಿಕಾರಿಗಳಾಲಿ ಅಥವಾ ಗೃಹ ಸಚಿವರು, ಹಿರಿಯ ಅಧಿಕಾರಿಗಳಾಗಿ ಚಕಾರವೆತ್ತಿಲ್ಲ. ಸೋಮವಾರ ಬಿಜೆಪಿಯಿಂದ ಯಾದಗಿರಿಯಲ್ಲಿ ಧರಣಿ ನಡೆಸಲಾಗುವುದು ಎಂದು ಮಾಜಿ ಶಾಸಕ ರಾಜಕುಮಾರ ಪಾಟೀಲï ತೆಲ್ಕೂರ್ ತಿಳಿಸಿದ್ದಾರೆ.