ವಿಚಾರ ಸಂಕಿರಣ 24ರಂದು

93dc252c-810e-4e48-bac6-69eb419a6fd2
Published on

ಧಾರವಾಡ: ಗಳಗನಾಥ, ನಾ. ಶ್ರೀ ರಾಜಪುರೋಹಿತ ಪ್ರತಿಷ್ಠಾನ ವತಿಯಿಂದ ಕರ್ನಾಟಕ ವಿದ್ಯಾವರ್ಧಕ ಸಂಘದ ರಾ.ಹ. ದೇಶಪಾಂಡೆ ಸಭಾಭವನದಲ್ಲಿ ಆ. 24ರಂದು ಸಂಜೆ 5.30ಕ್ಕೆ ಗಳಗನಾಥೋತ್ತರ ಕಾದಂಬರಿಕಾರರ ಕುರಿತು ವಿಚಾರ ಸಂಕಿರಣ ಏರ್ಪಡಿಸಲಾಗಿದೆ.
ವಿದ್ವಾಂಸ ಡಾ. ಶ್ರೀರಾಮ ಭಟ್ ವಿಚಾರ ಸಂಕಿರಣಕ್ಕೆ ಚಾಲನೆ ನೀಡಲಿದ್ದು, ಹಿರಿಯ ಚಿಂತಕ ಡಾ. ಶ್ರೀನಿವಾಸ ವಾಡಪ್ಪಿ ಅವರು ದೇವುಡು ನರಸಿಂಹ ಶಾಸ್ತ್ರಿಗಳ ಕಾದಂಬರಿ ಮಹಾಕ್ಷತ್ರಿಯ ಕುರಿತು, ಸಾಹಿತಿ ಶ್ರೀಧರ ಹೆಗಡೆ ಭದ್ರನ್ ಅವರು ಅನಕೃ ಕಾದಂಬರಿ ಸಂಧ್ಯಾರಾಗ ಕುರಿತು ಉಪನ್ಯಾಸ ನೀಡುವರು. ಅತಿಥಿಯಾಗಿ ಪ್ರೊ. ದುಷ್ಯಂತ ನಾಡಗೌಡ ಆಗಮಿಸುವರು. ನರಸಿಂಹರಾವ ಸೋಮಲಾಪುರ ಅಧ್ಯಕ್ಷತೆ ವಹಿಸುವರು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net