ವಿಕೆ ಸಲಗರ ವಿಎಸ್ಸೆಸ್ಸೆನ್‌ಗೆ ಆಯ್ಕೆ

0408 KML 01
ಕಮಲಾಪುರ ತಾಲೂಕಿನ ವಿಕೆ ಸಲಗರ ಗ್ರಾಮದ ವಿ ಎಸï ಎಸï ಎನï ಚುನಾವಣೆಯಲ್ಲಿ ವಿಜೇತ ಅಭ್ಯಥಿ೯ಗಳು ವಿಜಯದ ಸಂಕೇತ ತೋರಿ ಹಷ೯ ವ್ಯಕ್ತಪಡಿಸಿದರು.
Published on

ಕಮಲಾಪುರ: ವಿಕೆ ಸಲಗರ ಗ್ರಾಮದ ವ್ಯವ ವ್ಯವಸಾಯ ಸೇವಾ ಸಹಕಾರ ಸಂಘ (ವಿಎಸ್‌ಎಸ್‌ಎನ್)ದ ೯ ನಿರ್ದೇಶಕರ ಸ್ಥಾನಗಳಿಗೆ ಭಾನುವಾರ ಶಾಂತಿಯುತ ಚುನಾವಣೆ ನಡೆಯಿತು.

ವಿಕೆ ಸಲಗರ ವಿಎಸ್‌ಎಸ್‌ಎನ್ ವ್ಯಾಪ್ತಿಯಲ್ಲಿ ಸಲಗರ, ಲೇಂಗಟಿ, ಮುದ್ದಡಗಿ ಗ್ರಾಮಗಳಿದ್ದು, ೧೦೯೭ ಮತದಾರರಿz್ದÁರೆ. ಒಟ್ಟು ೧೨ ಸ್ಥಾನಗಳಿದ್ದು, ಸಾಮಾನ್ಯ ೬, ಮಹಿಳೆ ೨, ಬಿಸಿಎ, ಬಿಸಿಬಿ, ಎಸ್ಸಿ ಹಾಗೂ ಎಸ್ಟಿ ತಲಾ ೧ ಕ್ಷೇತ್ರ ಮೀಸಲಾಗಿವೆ. ಮಹಿಳಾ ಕ್ಷೇತ್ರದಿಂದ ರಾಚಮ್ಮ ನಾಗಣ್ಣ, ಸೋನುಬಾಯಿ ರಾಮಶೆಟ್ಟಿ, ಎಸ್ಟಿ ಕ್ಷೇತ್ರದ ರಘುವೀರ ಕೋಳಿ ಅವಿರೋಧ ಆಯ್ಕೆಯಾಗಿದ್ದರು.

ಇನ್ನುಳಿದ ೯ ಕ್ಷೇತ್ರಗಳಿಗೆ ತೀವ್ರ ಪೈಪೋಟಿ ಏರ್ಪಟ್ಟಿದ್ದು, ಭಾನುವಾರ ಸಂಜೆವರೆಗೂ ಮತದಾನ, ಏಣಿಕೆ ಪ್ರಕ್ರಿಯೆ ನಡೆಯಿತು. ಕೊನೆಗೆ ಉಮಾಕಾಂತ ರಾಜಗೀರೆ, ಶಂಭುಲಿAಗ ರಾಮಶೆಟ್ಟಿ, ಶಂಭುಲಿAಗ ಗುಗಳೆ, ನಾಗಣ್ಣ ಬೆಳಮಗಿ, ಸಿದ್ರಾಮಪ್ಪ ಪಾಟೀಲï ಮುದ್ದಡಗಾ (ಸಾಮಾನ್ಯ ಕ್ಷೇತ್ರ), ಪಂಡಿತ ಜಮಾದಾರ (ಬಿಸಿಎ), ಕವಿರಾಜ ಕಣ್ಣಿ (ಬಿಸಿಬಿ), ಮಲ್ಲಿಕಾರ್ಜುನ ಮೀಶೆ (ಎಸ್ಸಿ), ಸಂತೋಷ ಮಗಿ (ಸಾಲಗಾರರಲ್ಲದ ಕ್ಷೇತ್ರ) ಗೆಲುವು ಸಾಧಿಸಿದರು. ರಾಜಕುಮಾರ ರಾಠೋಡ್ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.

ಮುಖಂಡರು ಹಾಗೂ ಕಾರ್ಯಕರ್ತರು, ಬೆಂಬಲಿಗರು ವಿಜಯೋತ್ಸವ ನಡೆಸಿದರು. ಜಿಪಂ ಸದಸ್ಯ ಶರಣಗೌಡ ಪಾಟೀಲï, ಮಲ್ಲಿಕಾರ್ಜುನ ರಾಜಗಿರೆ, ಬಾಬುರಾವ್ ಹಿರನಾಗಾಂವ್, ಬಸವರಾಜ ರಾಮಶೆಟ್ಟಿ, ಸಂಜುಕುಮಾರ್ ಪಾಟೀಲ್, ಗಜಾನಂದ ವಗ್ಗೆ, ಅP್ಷÀರಾಬಾಯಿ ಕಾಂಬ್ಳೆ, ರೇವಣಸಿದ್ದಪ್ಪ ಗೊಳೆ, ರಾಜು ಚವ್ಹಾಣ್, ವಿರೇಶ ಒಂಟಿ, ದೀಪಕ ಖೇಲ್ಡ್, ಪಂಚಾಷ್ಕರಿ ಮಠ, ಶಿವಾನಂದ ರಾಮಶೆಟ್ಟಿ, ಶಿವರಾಜ ಬಿರಬಿಟ್ಟಿ, ಸಂತೋಷ ಪಾಟೀಲ್, ಚಂದ್ರಶೆಟ್ಟಿ ಇಮ್ಡೆ, ಶರಣಬಸಪ್ಪ ನಾಟೀಕಾರ, ಮಲ್ಲು ಮರಾಠ, ಸಂತೋಷ ಬಿರಬಿಟ್ಟೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net