ವಿಕಾಸಕ್ಕಾಗಿ ಭಾರತೀಯ ಸಂಸ್ಕೃತಿ ಉತ್ಸವ

bkt-4-9
ಬಾಗಲಕೋಟೆ ನಗರದ ಬಿವಿವಿ ಸಂಘದ ಮಿನಿ ಸಭಾಭವನದಲ್ಲಿ ಶನಿವಾರ ಜರುಗಿದ ಭಾರತೀಯ ಸಂಸ್ಕೃತಿ ಉತ್ಸವದ ಪೂರ್ವ ಭಾವಿ ಸಭೆ ಉದ್ದೇಶಿಸಿ ಭಾರತ ವಿಕಾಸ ಸಂಗಮದ ಕರ್ನಾಟಕ ಸಂರಕ್ಷಕ ಬಸವರಾಜ ಪಾಟೀಲ ಸೇಡಮ್ ಮಾತನಾಡಿದರು. ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ, ಮಾಜಿ ಶಾಸಕ, ಬಿವಿವಿ ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ ಇದ್ದರು.
Published on

ಬಾಗಲಕೋಟೆ: ನಮ್ಮೇಲ್ಲರ ಸಾಮೂಹಿಕ ಶಕ್ತಿಯಿಂದ ಭಾರತ ಅಸ್ಮಿತೆಯನ್ನು ಬಲಪಡಿಸುವ ಮತ್ತು ಹೊಸ ಬೆಳವಣಿಗೆ ಪ್ರೇರಣೆ ನೀಡುವ ಪ್ರಕೃತಿ ಕೇಂದ್ರಿತ ವಿಕಾಸಕಕ್ಕಾಗಿ ೭ ನೇ ಭಾರತೀಯ ಸಂಸ್ಕೃತಿ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ ಎಂದು ಭಾರತ ವಿಕಾಸ ಸಂಗಮದ ಕರ್ನಾಟಕ ಸಂರಕ್ಷಕ ಬಸವರಾಜ ಪಾಟೀಲ ಸೇಡಮ್ ಹೇಳಿದರು.

ನಗರದ ಬಿವಿವಿ ಸಂಘದ ಮಿನಿ ಸಭಾಭವನದಲ್ಲಿ ಶನಿವಾರ ಜರುಗಿದ ಭಾರತೀಯ ಸಂಸ್ಕೃತಿ ಉತ್ಸವದ ಪೂರ್ವ ಭಾವಿ ಸಭೆ ಉದ್ದೇಶಿಸಿ ಅವರು ಮಾತನಾಡಿದರು.

ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಹಾಗೂ ವಿಕಾಸ ಅಕಾಡೆಮಿ, ಭಾರತ ವಿಕಾಸ ಸಂಗಮದ ಆಶ್ರಯದಲ್ಲಿ ಸೇಡಂ-ಕಲಬುರಗಿ ಹೆದ್ದಾರಿಯ ನೀಲಹಳ್ಳಿಯ ಸಮೀಪ ಪ್ರಕೃತಿ ನಗರದಲ್ಲಿ ಜ.೨೯ ರಿಂದ ೬ ವರೆಗೆ ಕೊತ್ತಲ ಸ್ವರ್ಣ ಜಯಂತಿ ಹಾಗೂ ೭ನೇ ಭಾರತೀಯ ಸಂಸ್ಕೃತಿ ಉತ್ಸವ ಏರ್ಪಡಿಸಲಾಗಿದೆ. ಭಾರತದ ಸಂಸ್ಕೃತಿಯ ಸಾರ, ಸುಸ್ಥಿರ ಅಭಿವೃದ್ಧಿ, ಆರ್ಥಿಕ ಮತ್ತು ಸಾಮಾಜಿಕ ಭದ್ರತೆಯನ್ನು ಮುಂದಿನ ಪಿಳಗೆಗೆ ಕೊಂಡೊಯ್ಯುವ ನಿಟ್ಟಿನಲ್ಲಿ ಈ ಉತ್ಸವ ಮೈಲುಗಲ್ಲಾಗಲಿದೆ ಎಂದರು.

ಸಮುದಾಯದಲ್ಲಿ ಅನಾದಿಕಾಲದಿಂದ ಇರುವ ಬುದ್ದಿವಂತಿಕೆ ಮತ್ತು ಪ್ರಗತಿಯ ಹಂಚಿಕೆಯ ಆಚರಣೆ ಈ ಹಬ್ಬದ ಮುಖ್ಯ ದ್ಯೇಯ, ಇದು ಕೇವಲ ಸಂಗಮವಲ್ಲ ಕಲ್ಪನೆಗಳು ಸಂಸ್ಕೃತಿ ಮತ್ತು ಜನಸಮುದಾಯದ ಮಹಾ ಸಮ್ಮಿಲನ ರಾಷ್ಟಾçದ್ಯಂತ ಇರುವ ಮಹಾನ್ ದಾರ್ಶನಿಕರು, ಚಿಂತಕರು, ಕುಶಲಕರ್ಮಿಗಳು ಮತ್ತು ಸವೋದ್ಯಮಿಗಳು ಒಂದೇ ಉದ್ದೇಶಕ್ಕಾಗಿ ಒಗ್ಗೂಡಿ ಚಿಂತನ ಮತ್ತು ಚರ್ಚೆಗಳ ಮೂಲಕ ಸಮುದಾಯದ ಸುಸ್ಥಿರ ಅಭಿವೃದ್ಧಿ, ಆರೋಗ್ಯ ಮತ್ತು ಏಕತೆ ನಿರ್ಮಿಸಲು ಈ ಉತ್ಸವ ವೇದಿಕೆಯಾಗಲಿದೆ. ವಾಣಿಜ್ಯೋದ್ಯಮದ ಸಶಕ್ತಿಕರಣ, ಪರಿಸರ ಸಂರಕ್ಷಣೆ, ಸುಸ್ಥಿರ ಸಮಗ್ರ ಕೃಷಿ, ಶಿಕ್ಷಣ ಹಾಗೂ ಸಮಗ್ರ ಯೋಗಕ್ಷೇಮವನ್ನು ಪೋಷಿಸುವ ಉತ್ಸವ ವಾಗಲಿದೆ ಎಂದರು.

ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಮಾತನಾಡಿ, ಭಾರತ ವಿಕಾಸ ಸಂಗಮವು ಕೆ.ಎನ್.ಗೋವಿಂದಾಚಾರ್ಯರ ಕನಸಿನ ಕೂಸಾಗಿದೆ, ತನ್ಮೂಲಕ ಭಾರತೀಯ ಸಂಸ್ಕೃತಿ ಉತ್ಸವದ ಆಯೋಜನೆ ಪ್ರಾರಂಭಿಸಿ ಅದನ್ನು ೩ ವರ್ಷಗಳಿಗೊಮ್ಮೆ ದೇಶದ ತುಂಬೆಲ್ಲಾ ಆಚರಿಸುತ್ತಾ ಬಂದಿರುವುದ ನಮ್ಮೆಲ್ಲರ ಭಾಗ್ಯವಾಗಿದೆ ಎಂದು ತಿಳಿಸಿದರು.

ಮಾಜಿ ಶಾಸಕ, ಬಿವಿವಿ ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ ಮಾತನಾಡಿ, ಭಾರತ ವಿಕಾಸ ಸಂಗಮವೂ ಪ್ರಾಚೀನ ಭಾರತದ ಕಾಲಾತೀತ ಉದಾತ್ತ ಚಿಂತನೆ ಹಾಗೂ ಮೌಲ್ಯಗಳನ್ನು ಅಳವಡಿಸಿಕೊಂಡಿದ್ದು, ಇದು ಸಮಾಜ ಹಾಗೂ ಪ್ರಕೃತಿ ಮಾತೆಯ ನಡುವೆ ಸಂಬAಧವನ್ನು ಬೆಸೆಯುವಲ್ಲಿ ಪ್ರಮುಖ ಪಾತ್ರ ವಹಿಸಿದೆ, ಪ್ರಕೃತಿ ಕೇಂದ್ರಿತ ಅಭಿವೃದ್ಧಿಯು ಈ ಸಂಸ್ಥೆಯ ಧ್ಯೇಯವಾಗಿದೆ. ಅಲ್ಲದೆ ಸುಸ್ಥಿರ ಬೆಳವಣಿಗೆ ಹಾಗೂ ಅಭಿವೃದ್ಧಿಗಾಗಿ ಹಲವಾರು ವ್ಯಕ್ತಿಗಳು ಹಾಗೂ ಸಂಸ್ಥೆಗಳನ್ನು ಒಗ್ಗೂಡಿಸಿಕೊಂಡು ಶಿಕ್ಷಣ, ಆರೋಗ್ಯ, ಪರಿಸರ, ಕೃಷಿ, ಮಹಿಳಾ ಸಬಲೀಕರಣಗಳಂತಹ ವಿಭಿನ್ನವಾದ ಕ್ಷೇತ್ರಗಳಲ್ಲಿ ಶ್ರೀಸಮಾನ್ಯರ ಅಮಗ್ರ ವಿಕಾಸಕ್ಕಾಗಿ, ನನ್ನ ಹಳ್ಳಿ, ನನ್ನ ದೇಶ, ನನ್ನ ಜಿಲ್ಲೆ ನನ್ನ ಜಗತ್ತುಗಳಂತಹ ಪರಿಕಲ್ಪಣೆಗಳ ಮೂಲಕ ಸಮಾಜ ಪರಿವರ್ತನೆಯ ಮತ್ತೊಂದು ಮುಖವಾಗಿದ್ದು, ಎಲ್ಲರೂ ಈ ಭಾರತೀಯ ಸಂಸ್ಕೃತಿ ಉತ್ತವಕ್ಕೆ ಸಹಾಯ ಸಹಕಾರ ನೀಡುವುದರ ಜೊತೆಗೆ ಎಲ್ಲರೂ ಪಾಲ್ಗೊಂಡು ಯಶಸ್ಸುಗೊಳಿಸೋಣ ಎಂದು ಕರೆ ನೀಡಿದರು.

sಭೆಯಲ್ಲಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ ಸೇರಿದಂತೆ ಸಂಘದ ಸದಸ್ಯರುಗಳು, ಆಡಳಿತ ಮಂಡಳಿ ಕಾರ್ಯಾಧ್ಯಕ್ಷ, ವಿವಿಧ ಮಹಾವಿದ್ಯಾಲಯಗಳ ಪ್ರಾಚಾರ್ಯರು ಸೇರಿದಂತೆ ಅನೇಕರು ಇದ್ದರು. ವಿ.ಆರ್.ಶಿರೂಳ ಸ್ವಾಗತಿಸಿದರು, ಪಿ.ಎನ್.ಸಿಂಪಿ ವಂದಿಸಿದರು, ರಮೇಶ ಯಾಮನಶೆಟ್ಟಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net