ವಿಕಲಾಂಗ ಮಕ್ಕಳ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಿ

21BK1
ಬಸವಕಲ್ಯಾಣದ ಸಂಸ್ಥಾನ ಗವಿಮಠದಲ್ಲಿ ವಿಕಲಾಂಗ ಮಕ್ಕಳಿಗೆ ಕ್ರೀಡೆ ಮತ್ತು ಕ್ಷೇತ್ರ ಭೇಟಿಯ ಅರಿವು ಮೂಡಿಸುವ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಶ್ರೀ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಮಾತನಾಡಿದರು. ಕೆ.ಜಿ.ಶರಣಪ್ಪ ಗದಲೇಗಾಂವ, ಶಾಲಿವಾನ ಬಿರಾದಾರ, ಪುಂಡಲೀಕ ಬಸನಾಯಕ, ಬಾಲಕೃಷ್ಣ ಪಾಟೀಲ್, ಶ್ಯಾಮಲಾ, ಅನಿತಾ ಇದ್ದರು.
Published on

ಬಸವಕಲ್ಯಾಣ: ವಿಕಲಾಂಗ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಪಾಲಕರು, ಸಮಾಜ ಮತ್ತು ಸರ್ಕಾರ ಹೆಚ್ಚಿನ ಕಾಳಜಿ ವಹಿಸಬೇಕಿದೆ ಎಂದು ಸಂಸ್ಥಾನ ಗವಿಮಠದ ಶ್ರೀ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಹೇಳಿದರು.

ಸಂಸ್ಥಾನ ಗವಿಮಠದಲ್ಲಿ ಬುಧವಾರ ವಿಕಲಾಂಗ ಮಕ್ಕಳಿಗೆ ಕ್ರೀಡೆ ಮತ್ತು ಕ್ಷೇತ್ರ ಭೇಟಿಯ ಅರಿವು ಮೂಡಿಸುವ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಆಟ-ಪಾಠಗಳಲ್ಲಿ ವಿಜೇತರಾದ ಮಕ್ಕಳಿಗೆ ಪ್ರಶಸ್ತಿ ಪತ್ರ ಹಾಗೂ ಬಹುಮಾನ ವಿತರಿಸಿ ಮಾತನಾಡಿದ ಅವರು, ವಿಶೇಷಚೇತನ ಮಕ್ಕಳಲ್ಲಿಯ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಲು ಎಲ್ಲರೂ ಕಾಳಜಿ ವಹಿಸಬೇಕು ಎಂದರು.

ಸಮನ್ವಯ ಶಿಕ್ಷಣದ ಸಂಪನ್ಮೂಲ ಶಿಕ್ಷಕ ಕೆ.ಜಿ. ಶರಣಪ್ಪ ಗದಲೇಗಾಂವ ಪ್ರಾಸ್ತಾವಿಕ ಮಾತನಾಡಿದರು.

ಬಿಆರ್‌ಪಿಗಳಾದ ಪುಂಡಲೀಕ ಬಸನಾಯಕ, ಬಾಲಕೃಷ್ಣ ಪಾಟೀಲ್, ದೈಹಿಕ ಶಿಕ್ಷಣ ಶಿಕ್ಷಕ ಮಾರುತಿ ಸೂರ್ಯವಂಶಿ, ಮುಖ್ಯಗುರು ಶ್ಯಾಮಲಾ, ಶಿಕ್ಷಕಿ ಅನಿತಾ, ಮಾರತಾ, ಇತರರಿದ್ದರು. ಬಿಆರ್‌ಪಿ ಶಾಲಿವಾನ ಬಿರಾದಾರ ನಿರೂಪಣೆ ಮಾಡಿದರು. ಚನ್ನವೀರ ಹರಸೂರು ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net