ವಿಕಲಚೇತನರು ಯುಡಿಐಡಿ ಕಾರ್ಡ್ ಸೌಲಭ್ಯ ಪಡೆದುಕೊಳ್ಳಬೇಕು

Photo 1 18-08-2023
ಮೂಡಲಗಿಯಲ್ಲಿ ಶುಕ್ರವಾರ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮೂಡಲಗಿ ಸಮುದಾಯ ಆರೋಗ್ಯ ಕೇಂದ್ರದಿಂದ ವಿಕಲಚೇತನರ ಮನೆ ಬಾಗಿಲಿಗೆ ಯುಡಿಐಡಿ ಕಾರ್ಡಗಳನ್ನು ಫಲಾನುಭವಿಗಳಿಗೆ ವಿತರಿಸಿ ಮಾತನಾಡಿದರು.
Published on

ಮೂಡಲಗಿ : ವಿಕಲಚೇತನ ಗುರುತಿನ ಯುಡಿಐಡಿ ಕಾಡ್‌ರ್ಗಳನ್ನು ದೇಶಾದ್ಯಂತ ಅಂಗವೈಕಲ್ಯತೆಯ ಪುರಾವೆಯಾಗಿ ಪರಿಗಣಿಸಲಾಗುತ್ತಿದೆ.ಇದು ವಿಕಲಚೇತನರಿಗೆ ಸರ್ಕಾರದ ವಿವಿಧ ಯೋಜನೆಗಳಾದ ವಿದ್ಯಾರ್ಥಿ ವೇತನ, ಕೌಶಲ್ಯ ತರಬೇತಿ, ಸಮನ್ವಯ ಶಿಕ್ಷಣ, ಪುನರ್ವಸತಿ ಯೋಜನೆ, ಪಿಂಚಣಿ, ರೈಲ್ವೆ ರಿಯಾಯತಿ ಮುಂತಾದ ಸೌಲಭ್ಯಗಳನ್ನು ಪಡೆಯಲು ಯುಡಿಐಡಿ ಕಾರ್ಡ್ ಪೂರಕವಾಗಿರುತ್ತದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.
ಶುಕ್ರವಾರ ಪಟ್ಟಣದ ತಹಶೀಲ್ದಾರ ಕಛೇರಿಯಲ್ಲಿ ಆರೋಗ್ಯ ಇಲಾಖೆಯಿಂದ ಜರುಗಿದ ವಿಕಲಚೇತನರಿಗೆ ವಿಶಿಷ್ಟ ಗುರುತಿನ ಚೀಟಿ(ಯುಡಿಐಡಿ) ವಿತರಿಸಿ ಮಾತನಾಡಿದರು.
ಯುಡಿಐಡಿ ಕಾರ್ಡ ಸಹಾಯದಿಂದ ಎಲ್ಲ ಹಂತಗಳಲ್ಲಿ ವಿಕಲಚೇತನರಿಗೆ ಒದಗಿಸಲಾಗುವ ಸೌಲಭ್ಯಗಳ ಆರ್ಥಿಕ ಹಾಗೂ ಭೌತಿಕ ಪ್ರಗತಿಯನ್ನು ಗುರುತಿಸಲು ಸಹಕಾರಿಯಾಗುತ್ತಿದೆ. ಸ್ಮಾರ್ಟಕಾರ್ಡ ರೂಪದಲ್ಲಿ ಗುರುತಿನ ಚೀಟಿಯನ್ನು ವಿಕಲಚೇತನರಿಗೆ ನೀಡಲಾಗುತ್ತಿದೆ. ಇದಕ್ಕೂ ಪೂರ್ವದಲ್ಲಿ ವಿಕಲಚೇತನರು ಯುಡಿಐಡಿ ಕಾರ್ಡನ್ನು ಪಡೆಯಲು ಗೋಕಾಕಕ್ಕೆ ತೆರಳಬೇಕಾಗಿತ್ತು. ಮೂಡಲಗಿ ಹೊಸ ತಾಲೂಕು ಕೇಂದ್ರವಾಗಿರುವುದರಿಂದ ಈ ತಾಲೂಕಿನ ವಿಕಲಚೇತನರ ಅನುಕೂಲಕ್ಕಾಗಿ ಮೂಡಲಗಿಯಲ್ಲಿಯೇ ಈ ಕಾರ್ಡನ್ನು ವಿತರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ.
ವಿಕಲಚೇತನರು ಯುಡಿಐಡಿ ಕಾರ್ಡನ್ನು ಪಡೆಯಬೇಕಾದರೆ ನೇರವಾಗಿ ಇಲಾಖೆಯ ಅಧಿಕಾರಿಗಳನ್ನು ಭೇಟಿ ಮಾಡಬೇಕು. ಯಾವುದೇ ಕಾರಣಕ್ಕೂ ಯಾರಿಗೂ ದುಡ್ಡು ನೀಡಬೇಡಿ. ಉಚಿತವಾಗಿ ಫಲಾನುಭವಿಗಳು ಈ ಕಾರ್ಡನ್ನು ಅಧಿಕಾರಿಗಳಿಂದ ಪಡೆಯುವಂತೆ ಸಲಹೆ ನೀಡಿದರು. ಮೂಡಲಗಿ ಹೊಸ ತಾಲೂಕು ೋಷಣೆಯಾದ ಬಳಿಕ ಬಾಕಿ ಉಳಿದಿರುವ ತಾಲೂಕು ಮಟ್ಟದ ಸರ್ಕಾರಿ ಕಛೇರಿಗಳನ್ನು ತೆರೆಯಲು ಈಗಾಗಲೇ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಆದಷ್ಟು ಬೇಗನೆ ತಾಲೂಕು ಮಟ್ಟದ ಎಲ್ಲ ಕಚೇರಿಗಳು ಪ್ರಾರಂಭಗೊಳ್ಳಲಿವೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಭರವಸೆ ನೀಡಿದರು.ತಹಶೀಲ್ದಾರ ಶಿವಾನಂದ ಬಬಲಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಫಕೀರಪ್ಪ ಚಿನ್ನನ್ನವರ, ತಾಲೂಕಾ ಆರೋಗ್ಯಾಧಿಕಾರಿ ಡಾ.ಮುತ್ತಣ್ಣ ಕೊಪ್ಪದ, ಸಮುದಾಯ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ.ಭಾರತಿ ಕೋಣಿ, ಸಿಪಿಐ ಶ್ರೀಶೈಲ ಬ್ಯಾಕೋಡ, ಪುರಸಭೆ ಮಾಜಿ ಉಪಾಧ್ಯಕ್ಷ ರವೀಂದ್ರ ಸೋನವಾಲಕರ, ಮಾಜಿ ಅಧ್ಯಕ್ಷ ಹನಮಂತ ಗುಡ್ಲಮನಿ, ಪುರಸಭೆ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net