ವಿಐಎಸ್​ಎಲ್ ಗುತ್ತಿಗೆ ಕಾರ್ವಿುಕರಿಗೆ ಮತ್ತೆ ಕೆಲಸ

VISL
Published on

ಭದ್ರಾವತಿ: ಕಳೆದ 11 ತಿಂಗಳಿನಿಂದ ಕೆಲಸವಿಲ್ಲದೆ ವಿಐಎಸ್​ಎಲ್ ಕಾರ್ಖಾನೆಯಿಂದ ಹೊರಗುಳಿದಿದ್ದ 105 ಜನ ಗುತ್ತಿಗೆ ಕಾರ್ವಿುಕರಿಗೆ ಮತ್ತೆ ಕೆಲಸ ಮಾಡುವ ಭಾಗ್ಯ ದೊರೆತಿದೆ.

ಹಾಲಿ, ಮಾಜಿ ಶಾಸಕರು, ಸಂಸದರು, ವಿವಿಧ ಪಕ್ಷಗಳ ಮುಖಂಡರು ನಡೆಸಿದ ಹಲವು ಹೋರಾಟಗಳು ಹಾಗೂ ಸತತ ಮಾತುಕತೆಗಳ ಪ್ರಯತ್ನಕ್ಕೆ ಹಲವು ತಿಂಗಳ ನಂತರ ಮನ್ನಣೆ ಸಿಕ್ಕಿದೆ. ಆ ಮೂಲಕ ಕಾರ್ಖಾನೆ ಮುಂಭಾಗ ನಿರಂತರವಾಗಿ ಹಾಕಲಾಗಿದ್ದ ಶಾಮಿಯಾನ ತೆಗೆಯಲಾಗಿದೆ.

ವಿಐಎಸ್​ಎಲ್ ಕಾರ್ಖಾನೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಒಟ್ಟು 1200 ಕಾರ್ವಿುಕರು ಕೆಲಸ ನಿರ್ವಹಿಸುತ್ತಿದ್ದು ‘ಜಾಬ್ ಕಾಂಟ್ರ್ಯಾಕ್ಟ್’ ಮೇಲೆ ಕೆಲಸ ಮಾಡುತ್ತಿದ್ದ 105 ಕಾರ್ವಿುಕರು ಗುತ್ತಿಗೆ ನವೀಕರಣವಾಗದೆ ಹೊರಗುಳಿದಿದ್ದರು. ಈ ಹಿನ್ನೆಲೆಯಲ್ಲಿ ಪ್ರತಿನಿತ್ಯ ವಿವಿಧ ಪಕ್ಷಗಳ ಮುಖಂಡರು, ರಾಜಕೀಯ ಪಕ್ಷಗಳ ನಾಯಕರು, ಸಂಸದರು, ಶಾಸಕರು ಕಾರ್ಖಾನೆ ಆಡಳಿತ ಮಂಡಳಿಯ ವಿರುದ್ಧ ಕಾರ್ವಿುಕರ ಪರವಾಗಿ ಹೋರಾಟ ನಡೆಸಿದ್ದರು. ಕಾರ್ಖಾನೆಯಿಂದ ಹೊರಗುಳಿದ 105 ಕಾರ್ವಿುಕರನ್ನು ಮರು ನೇಮಿಸಿಕೊಳ್ಳುವವರೆಗೂ ಹೋರಾಟ ಸ್ಥಗಿತಗೊಳಿಸುವುದಿಲ್ಲ ಎಂದು ಪಟ್ಟು ಹಿಡಿದಿದ್ದರು.

ಕಾಯಂ ನೌಕರರು, ಗುತ್ತಿಗೆ ಕಾರ್ವಿುಕರು ಹಾಗೂ ಜನಪ್ರತಿನಿಧಿಗಳ ಹೋರಾಟವನ್ನು ಸೂಕ್ಷ್ಮವಾಗಿ ಪರಿಗಣಿಸಿದ್ದ ಕಾರ್ಖಾನೆ ಆಡಳಿತ ಮಂಡಳಿ ಅಧಿಕಾರಿಗಳು ಜಾಬ್ ಟೆಂಡರ್​ಗೆ ಸಂಬಂಧಿಸಿದಂತೆ ಹಲವು ಬಾರಿ ಟೆಂಡರ್ ಕರೆದಿದ್ದರು. ಆದರೆ ಟೆಂಡರ್​ದಾರರು ಅರ್ಜಿ ಹಾಕಲು ಮುಂದಾಗದ ಕಾರಣ ಹಾಗೂ ಅನುತ್ಪಾದಕತೆ ಹಿನ್ನೆಲೆಯಲ್ಲಿ ಹಲವು ತಾಂತ್ರಿಕ ಸಮಸ್ಯೆಗಳಿಂದ 105 ಜನರಿಗೆ ಕೆಲಸ ನೀಡಲು ಸಾಧ್ಯವಾಗಿರಲಿಲ್ಲ. ಆದರೆ ಇದೀಗ ಆಮ್್ಪ್ಸ (ಎಎಂಪಿಎಸ್) ಕಂಪನಿಯೊಂದು ಟೆಂಡರ್ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಗುತ್ತಿಗೆ ಪಡೆದಿದೆ. ಈ ಹಿನ್ನೆಲೆಯಲ್ಲಿ 105 ಜನ ಗುತ್ತಿಗೆ ಕಾರ್ವಿುಕರು ಮತ್ತೆ ಕೆಲಸಕ್ಕೆ ಹೋಗುವಂತಾಗಿದೆ. ಆದರೆ ಇದೀಗ 80 ಕಾರ್ವಿುಕರು ಮಾತ್ರ ಕೆಲಸಕ್ಕೆ ತೆರಳುತ್ತಿದ್ದು ಉಳಿದ ಕಾರ್ವಿುಕರು ಈಗಾಗಲೇ ಕೆಲಸಕ್ಕಾಗಿ ಬೇರೆಡೆ ತೆರಳಿದ್ದಾರೆ ಎಂದು ಕಾರ್ವಿುಕ ವಲಯ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net