ವಿಐಎಸ್‌ಎಲ್‌ನಿಂದ ಸಸಿಗಳ ಹಸ್ತಾಂತರ

25bdvt1
ಭದ್ರಾವತಿಯಲ್ಲಿ ವಿಐಎಸ್‌ಎಲ್ ಕಾರ್ಖಾನೆಯಿಂದ ಅರಣ್ಯ ಇಲಾಖೆಗೆ 1100 ಸಸಿಗಳನ್ನು ವಿತರಿಸಲಾಯಿತು. ಬಿ.ಎಲ್. ಚಂದ್ವಾನಿ, ಕೆ.ಟಿ. ಹನುಮಂತಪ್ಪ, ಎಲ್.ಪ್ರವೀಣ್ ಕುಮಾರ್ ಇತರರಿದ್ದರು.
Published on

ಭದ್ರಾವತಿ: ಹಸಿರೀಕರಣದೆಡೆಗೆ ಮತ್ತು ಸ್ವಚ್ಛತಾ ಹಿ ಸೇವಾ ಉಪಕ್ರಮದ ಭಾಗವಾಗಿ ಸಾಮಾಜಿಕ ಅರಣ್ಯೀಕರಣದ ಅಡಿಯಲ್ಲಿ ಕರ್ನಾಟಕ ಅರಣ್ಯ ಇಲಾಖೆ ಶಿವಮೊಗ್ಗದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕೆ.ಟಿ. ಹನುಮಂತಪ್ಪ ಅವರಿಗೆ ವಿಐಎಸ್‌ಎಲ್‌ನ ಕಾರ್ಯಪಾಲಕ ನಿರ್ದೇಶಕ ಬಿ.ಎಲ್. ಚಂದ್ವಾನಿ 1100 ಸಸಿಗಳನ್ನು ಹಸ್ತಾಂತರಿಸಿದರು.

ಸಸಿಗಳನ್ನು ಸ್ವೀಕರಿಸಿ ಮಾತನಾಡಿದ ಕೆ.ಟಿ.ಹನುಮಂತಪ್ಪ, ವಿಐಎಸ್‌ಎಲ್ ಕಾರ್ಖಾನೆಯು ಈ ಬಾರಿ ನಗರ ಪ್ರದೇಶದೆಲ್ಲೆಡೆ ಸಸಿಗಳನ್ನು ವಿತರಣೆ ಮಾಡುವ ಮೂಲಕ ಅರಣ್ಯೀಕರಣಕ್ಕೆ ಹೆಚ್ಚಿನ ಕೊಡುಗೆ ನೀಡಿದೆ. ಹಲವು ಆಚರಣೆಗಳ ವಿಶೇಷ ದಿನಗಳಲ್ಲಿ ಸಾರ್ವಜನಿಕರಿಗೆ ಉಪಯೋಗವಾಗುವಂತಹ ನುಗ್ಗೆ, ಪಪ್ಪಾಯಿ, ಕರಿಬೇವಿನಂತಹ ಸಸಿಗಳನ್ನು ಉಚಿತವಾಗಿ ವಿತರಣೆ ಮಾಡುವುದು ಹಾಗೂ ಅರಣ್ಯೀಕರಣವನ್ನು ಉತ್ತೇಜಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದರು.

ವಿಐಎಸ್‌ಎಲ್ ಅಧಿಕಾರಿಗಳಾದ ಕೆ.ಎಸ್.ಸುರೇಶ್, ಎಲ್.ಪ್ರವೀಣ್ ಕುಮಾರ್, ಮುತ್ತಣ್ಣ ಸುಬ್ಬರಾವ್, ಕಾರ್ಮಿಕ ಸಂಘದ ಅಧ್ಯಕ್ಷ ಜೆ.ಜಗದೀಶ್, ಅಧಿಕಾರಿಗಳ ಸಂಘದ ಉಪಾಧ್ಯಕ್ಷ ಡಾ.ಎಸ್.ಎನ್. ಸುರೇಶ್, ಖಜಾಂಚಿ ಇಳಯರಾಜ, ಅರಣ್ಯ ಇಲಾಖೆ ಉಪ ಅರಣ್ಯ ಸಂರಕ್ಷಣಾಧಿಕಾರಿ ರವೀಂದ್ರಕುಮಾರ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರತ್ನಪ್ರಭಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net