ವಿ.ಜಿ.ಕೊಪ್ಪಲು ಡೇರಿಗೆ ಸುರೇಶ್ ಅಧ್ಯಕ್ಷ

V. G KOPPALU
Published on

ರಾವಂದೂರು: ವಿ.ಜಿ.ಕೊಪ್ಪಲು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಸುರೇಶ್, ಉಪಾಧ್ಯಕ್ಷೆಯಾಗಿ ಸುಧಾರಾಣಿ ಅವಿರೋಧವಾಗಿ ಆಯ್ಕೆಯಾದರು.


ಪಿರಿಯಾಪಟ್ಟಣ ತಾಲೂಕು ವಿ.ಜಿ.ಕೊಪ್ಪಲು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆ ಸೋಮವಾರ ಚುನಾವಣೆ ಪ್ರಕ್ರಿಯೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಸುರೇಶ್, ಉಪಾಧ್ಯಕ್ಷ ಸ್ಥಾನಕ್ಕೆ ಸುಧಾರಾಣಿ ಇಬ್ಬರೇ ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಯೂ ಆದ ಸಹಕಾರ ಇಲಾಖೆ ಅಧಿಕಾರಿ ಇತೀಂದ್ರ ಅವಿರೋಧ ಆಯ್ಕೆ ಘೋಷಿಸಿದರು.


ಬಳಿಕ ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ಹಾಗೂ ನಿರ್ದೇಶಕರಾದ ಎಚ್.ಟಿ.ವೆಂಕಟೇಶ್, ಮಹೇಂದ್ರ, ವೆಂಕಟೇಶ್, ವಿ.ಜಿ.ಸತೀಶ್, ಲೋಕೇಶ್, ಪರಮೇಶ್, ಸುಂದ್ರಮ್ಮ, ಸೋಮಾಚಾರಿ ಅವರನ್ನು ಆಭಿನಂದಿಸಲಾಯಿತು. ಸಂಘದ ಕಾರ್ಯದರ್ಶಿ ಮಂಜುನಾಥ್, ಮುಖಂಡರಾದ ದಿನೇಶ್, ಎಂ.ಲೋಕೇಶ್, ಜಗದೀಶ್, ಹೇಮಂತ್, ನಾಗರಾಜು, ಪಿ.ರಮೇಶ್, ಕಾಳೇಗೌಡ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net