

ವಾಹನದಿಂದ ಬಿದ್ದು ಚಾಲಕ ಸಾವು
ಬೆಳಗಾವಿ: ಚಾಲಕನ ನಿಯಂತ್ರಣ ತಪ್ಪಿ ಗೊಡ್ಸ್ ವಾಹನದಿಂದ ಬಿದ್ದು ಚಾಲಕ ಮೃತ ಪಟ್ಟಿರುವ ಘಟನೆ ನಗರದ ಆಟೋ ನಗರದ ಕರಿಯಮ್ಮ ದೇವಸ್ಥಾನದ ಬಳಿ ಸೋಮವಾರ ನಡೆದಿದೆ.
ಆಟೋ ನಗರ ನಿವಾಸಿ ಗೋಪಾಲ ಹುಚ್ಚಪ್ಪಲಮಾಣಿ (60) ಮೃತ. ಈತ ರಾಮತೀರ್ಥ ನಗರದಿಂದ ಆಟೋ ನಗರದ ಕಡೆ ಸಂಚರಿಸು ತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಗೂಡ್ಸ್ ವಾಹನದಿಂದ ಬಿದ್ದ ಪರಿಣಾಮ ಗಾಯಗೊಂಡಿದ್ದನು. ಗಾಯಾಳು ಚಿಕಿತ್ಸೆಗೆ ದಾಖಲಿಸುವ ದಾರಿಯೇ ಮಧ್ಯದಲ್ಲಿಯೇ ಮೃತನಾಗಿದ್ದಾನೆ. ಈ ಕುರಿತು ಉತ್ತರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.