ವಾಹನಗಳ ಸಂಚಾರ ಮಾರ್ಗಗಳಲ್ಲಿ ಬದಲಾವಣೆ

IMG_20240123_121049_670@1247538257--0004
Published on

ಚಿತ್ರದುರ್ಗ:ನಗರದ ಹೊರವಲಯ ಶ್ರೀ ಬಸವ ಮೂರ್ತಿ ಮಾದಾರ ಚನ್ನಯ್ಯ ಗುರುಪೀಠದ ಪಕ್ಕದ ಮೈದಾನದಲ್ಲಿ ಜ.28ರಂದು ನಡೆಯಲಿ ರುವ ರಾಜ್ಯಮಟ್ಟದ ಶೋಷಿತರ ಬೃಹತ್ ಜಾಗೃತಿ ಸಮಾವೇಶ ನಡೆಯಲಿದೆ. ಮುಖ್ಯಮಂತ್ರಿ,ಡಿಸಿಎಂ ಸೇರಿದಂತೆ ನಾನಾ ಸಚಿವರು ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಈ ಹಿನ್ನೆಲೆಯಲ್ಲಿ ಸುಗಮ ಸಂಚಾರದ ಉದ್ದೇಶದಿಂದಾಗಿ ಅಂದು ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಚಿತ್ರದುರ್ಗ ನಗರಕ್ಕೆ ವಿವಿಧೆಡೆ ಯಿಂದ ಆಗಮಿಸುವ ಭಾರಿ ಹಾಗೂ ಲಘು ವಾಹನಗಳ ಸಂಚಾರ ಮಾರ್ಗದಲ್ಲಿ ಬದಲಾವಣೆಗೊಳಿಸಿ ಜಿಲ್ಲಾಧಿಕಾರಿ ವೆಂಕಟೇಶ್ ಟಿ. ಅವರು ಆದೇಶಿಸಿದ್ದಾರೆ.
ಸಮಾವೇಶದಲ್ಲಿ ಪಾಲ್ಗೊಳ್ಳಲು ಅಂದು ರಾಜ್ಯದ ವಿವಿಧ ಜಿಲ್ಲೆಗಳಿಂದ ಲಕ್ಷಾಂತರ ಜನರು ವಾಹನಗಳಲ್ಲಿ ಆಗಮಿಸುವ ನಿರೀಕ್ಷೆಯಿದ್ದು, ಸಂಚಾರ ವ್ಯತ್ಯಯ ಉಂಟಾಗುವ ಸಾಧ್ಯತೆಗಳಿವೆ. ಆದ್ದರಿಂದ ಸಂಚಾರ ದಟ್ಟಣೆ ನಿಯಂತ್ರಿಸಲು ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡು ವ ಸಂಬಂಧ ವಾಹನಗಳ ಸಂಚಾರದಲ್ಲಿ ಕೆಲವು ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ.
ದಾವಣಗೆರೆ ಕಡೆಯಿಂದ ಬರುವ ವಾಹನಗಳು ಹೊಸ ಎನ್‌ಎಚ್-48(ಬೈಪಾಸ್)ಮೂಲಕ ರಾ.ಹೆ.13ರಲ್ಲಿ ಮುಂದುವರೆದು ಮ ದಕರಿಪುರದ ಸರ್ವಿಸ್ ರಸ್ತೆಯಿಂದ ಚಳ್ಳಕೆರೆ ರಸ್ತೆ ಮೂಲಕ ನಗರ ಪ್ರವೇಶಿಸಬೇಕು. ಹೊಸಪೇಟೆ(ಎನ್‌ಎಚ್50)ಕಡೆಯಿಂದ ಬರುವ ಪ್ರ ಯಾಣಿಕರ ವಾಹನಗಳು ಎನ್‌ಎಚ್ 48ರ ಬೈಪಾಸ್ ರಸ್ತೆ ಮುಖಾಂತರ ಮದಕರಿಪುರದ ಸರ್ವಿಸ್ ರಸ್ತೆಯಿಂದ ಚಳ್ಳಕೆರೆ ರಸ್ತೆ ಮೂಲಕ ನಗರಕ್ಕೆ ಬರಬೇಕು.
ಶಿವಮೊಗ್ಗ ಹಾಗೂ ಭೀಮಸಮುದ್ರ ಮಾರ್ಗಗಳಿಂದ ಬರುವ ವಾಹನಗಳು ಕಣಿವೆ ಕ್ರಾಸ್ ಮುಖಾಂತರ ನಗರಕ್ಕೆ ಬರಬೇಕು. ಶಿವ ಮೊಗ್ಗ ಕಡೆಯಿಂದ ಚನ್ನಗಿರಿ ಮಾರ್ಗ ಚಿತ್ರದುರ್ಗಕ್ಕೆ ಸಂಚರಿಸುವ ಸರಕು ಸಾಗಣೆ ಭಾರಿ ವಾಹನಗಳು ಚನ್ನಗಿರಿಯಿಂದ ಸಂತೆಬೆನ್ನೂರು ಕ್ರಾಸ್ ಹಾದು ಸಂತೆಬೆನ್ನೂರು ಎನ್‌ಎಚ್48ರ ರಸ್ತೆ ಮುಖಾತರ ಸಂಚರಿಸಬೇಕು. ಮುರುಘರಾಜೇಂದ್ರ ಬೃಹನ್ಮಠದ ಮುಂಭಾಗದಿಂದ ಸೀಬಾರ ಅಂಡರ್‌ಪಾಸ್‌ವರೆಗಿನ ಎನ್‌ಎಚ್48ರಲ್ಲಿ ಎಲ್ಲ ಬಗೆಯ ವಾಹನಗಳ ಸಂಚಾರ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿ ದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net