ವಾಹನಗಳ ಬಹಿರಂಗ ಹರಾಜು

Published on

ಚಾಮರಾಜನಗರ: ಜಿಲ್ಲೆಯಾದ್ಯಂತ ವಿವಿಧ ಅಬಕಾರಿ ಪ್ರಕರಣಗಳಲ್ಲಿ ಜಪ್ತಿಪಡಿಸಿ ಮುಟ್ಟುಗೋಲು ಹಾಕಿಕೊಂಡಿರುವ 31 ವಾಹನಗಳನ್ನು ಅಬಕಾರಿ ಇಲಾಖೆಯ ವಲಯ ಕಚೇರಿ ಆವರಣಗಳಲ್ಲಿ ಬಹಿರಂಗ ಹರಾಜು ಮೂಲಕ ವಿಲೇವಾರಿ ಮಾಡಲಾಗುವುದು.

ಮೇ 22ರಂದು ಚಾಮರಾಜನಗರ ವಲಯದ 13 ವಾಹನಗಳು, ಮೇ 26ರಂದು ಕೊಳ್ಳೇಗಾಲ ವಲಯದ 9 ವಾಹನಗಳು, ಮೇ 28ರಂದು ಗುಂಡ್ಲುಪೇಟೆ ವಲಯದ 9 ವಾಹನಗಳು ಸೇರಿದಂತೆ ಒಟ್ಟು 31 ವಾಹನಗಳನ್ನು ಹರಾಜು ಮೂಲಕ ವಿಲೇವಾರಿ ಮಾಡಲಾಗುವುದು. ಹರಾಜಿಗೆ ಇರುವ ವಾಹನಗಳನ್ನು ಸಂಬಂಧಪಟ್ಟ ವಲಯ ಅಬಕಾರಿ ನಿರೀಕ್ಷಕರ ಕಚೇರಿಗಳಲ್ಲಿ ಪರಿಶೀಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ವಲಯ ಅಬಕಾರಿ ನಿರೀಕ್ಷಕರ ಕಚೇರಿ ಅಥವಾ ಅಬಕಾರಿ ಉಪ ಆಯುಕ್ತರ ಕಚೇರಿಯನ್ನು ಸಂಪರ್ಕಿಸುವಂತೆ ಜಿಲ್ಲೆಯ ಅಬಕಾರಿ ಡೆಪ್ಯೂಟಿ ಕಮೀಷನರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net