ವಾಹನ ದಟ್ಟಣೆ ನಿರ್ವಹಣೆಗೆ ಮನವಿ

traffic
Published on

ಕಲಬುರಗಿ: ನಗರದಲ್ಲಿ ದಿನೇ ದಿನೆ ಸಂಚಾರ ದಟ್ಟಣೆ ಹೆಚ್ಚುತ್ತಿದ್ದು, ನಿಯಮಬಾಹಿರವಾಗಿ ನಿರ್ಮಿಸಿರುವ ಬೃಹತ್ ಮಾಲ್‌ಗಳು, ಕಟ್ಟಡಗಳೇ ಇದಕ್ಕೆ ಕಾರಣ. ಇದನ್ನು ಮಹಾನಗರ ಪಾಲಿಕೆಯವರು ನಿಯಯಂತ್ರಿಸಬೇಕು ಎಂದು ಕರ್ನಾಟಕ ಸಂಘಟನಾ ವೇದಿಕೆ ಅಧ್ಯP್ಷÀ ಗುರುರಾಜ ಬಂಡಿ ಮನವಿ ಮಾಡಿದರು. ನಗರದಲ್ಲಿ ವಾಹನಗಳ ಸಂಖ್ಯೆ ಹೆಚ್ಚುತ್ತಿದ್ದು, ರಸ್ತೆ ವಿಸ್ತರಣೆ ಆಗುತ್ತಿಲ್ಲ. ಪಾದಚಾರಿಗಳು ರಸ್ತೆ ಬದಿ ಓಡಾಡಲು ಆಗುತ್ತಿಲ್ಲ. ಪಾಲಿಕೆ ಅಧಿಕಾರಿಗಳು, ಜನಪ್ರತಿನಿಧಿಗಳು, ಪೊಲೀಸರು ಪರಿಹಾರ ಕಂಡುಕೊಳ್ಳಬೇಕು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಖಂಡಿಸಿದರು. ನಗರದಲ್ಲಿ ಶಾಪಿಂಗ್ ಮಾಲ್‌ಗಳು, ವಾಣಿಜ್ಯ ಕಟ್ಟಡಗಳು ಹೆಚ್ಚಿದ್ದು, ಗ್ರಾಹಕರು, ಅಂಗಡಿಗಳ ಮಾಲಿಕರ ವಾಹನಗಳ ನಿಲ್ಲಲ್ಲು ವ್ಯವಸ್ಥೆ ಮಾಡುತ್ತಿಲ್ಲ. ನಿಲುಗಡೆ ಸ್ಥಳವನ್ನು ಅತಿಕ್ರಮಿಸಿಕೊಂಡಿದ್ದಾರೆ. ಇದರಿಂದ ರಸ್ತೆಯಲ್ಲೇ ವಾಹನ ನಿಲುಗಡೆ ಮಾಡುತ್ತಿದ್ದು, ಸಂಚಾರ ಸಮಸ್ಯೆ ಉಂಟಾಗುತ್ತಿದೆ. ಪಾಲಿಕೆಯವರು ಪರವಾನಗಿ ಬೇಕಾಬಿಟ್ಟಿ ನೀಡುತ್ತಿದ್ದಾರೆ ಎಂದು ಆರೋಪಿಸಿದರು. ಶೀಘ್ರ ಸಮಸ್ಯೆಗೆ ಪರಿಹಾರ ಒದಗಿಸದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದರು. ಈಶ್ವರ ಹೆಗ್ಗಾ, ಸಾಗರ ಬಾವಿ, ಉಮೇಶ ಬಿರಾದಾರ, ಸಿದ್ದು ಖೇಣಿ, ಪ್ರದೀಪ ಓಂಕಾರ, ಅನಿಲï ಬಂಡಿ, ಮುತ್ತಣ್ಣ ಬಚ್ಚನï ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net