ವಾಹನ ಡಿಕ್ಕಿಯಾಗಿ ಬಾಲಕ ಸಾವು

ತೇಜಸ್ ಗೌಡ
13 mlv 1 _____ ___( 7).
Published on

ಮಳವಳ್ಳಿ: ರಸ್ತೆ ದಾಟುತ್ತಿದ್ದ ತಾಯಿ ಹಾಗೂ ಮಗನಿಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಮಗ ಮೃತಪಟ್ಟಿದ್ದು, ತಾಯಿ ಗಂಭೀರ ಗಾಯಗೊಂಡಿದ್ದಾರೆ.

ಪಟ್ಟಣದ ಕನಕಪುರ ರಸ್ತೆಯ ಹೊಸ ಬಡಾವಣೆ ನಿವಾಸಿ ರಾಜು ಎಂಬುವರ ಪುತ್ರ ತೇಜಸ್‌ಗೌಡ(7) ಮೃತ ಬಾಲಕ. ಪತ್ನಿ ರಾಣಿ ಗಾಯಗೊಂಡವರು.
ಮಂಗಳವಾರ ರಾತ್ರಿ 8.30 ರಲ್ಲಿ ಟ್ಯೂಷನ್‌ಗೆ ತೆರಳಿದ್ದ ಮಗನನ್ನು ವಾಪಸ್ ಮನೆಗೆ ಕರೆದುಕೊಂಡು ಪಟ್ಟಣದ ವಿದ್ಯುತ್ ವಿತರಣಾ ಕೇಂದ್ರದ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ದಾಟುತ್ತಿದ್ದರು. ಈ ವೇಳೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಪರಾರಿಯಾಗಿದೆ. ಗಾಯಗೊಂಡಿದ್ದ ತಾಯಿ, ಮಗನನ್ನು ಸ್ಥಳೀಯರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ದರು. ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡಿ ಬೇರೆಡೆಗೆ ದಾಖಲಿಸುವಂತೆ ಸೂಚಿಸಿದರು.

ಕುಟುಂಬದವರು ಆಂಬುಲೆನ್ಸ್ ಮೂಲಕ ಮೈಸೂರಿನ ಖಾಸಗಿ ಆಸ್ಪತ್ರೆಗೆ ಇಬ್ಬರನ್ನೂ ದಾಖಲಿಸಿದರು. ಚಿಕಿತ್ಸೆಗೆ ಸ್ಪಂದಿಸದೆ ಬಾಲಕ ತೇಜಸ್‌ಗೌಡ ಮೃತಪಟ್ಟಿದ್ದಾನೆ. ರಾಣಿ ಅವರ ಎರಡು ಕಾಲಿನ ಮೂಳೆಗಳು ಮುರಿದಿದ್ದು ಚಿಕಿತ್ಸೆ ಮುಂದುವರಿದಿದೆ. ಪಟ್ಟಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net