ವಾಹನ ಡಿಕ್ಕಿ, ಬೈಕ್ ಸವಾರ ಸಾವು

accident
Published on

ಅಥಣಿ ಗ್ರಾಮೀಣ: ಅಪರಿಚಿತ ವಾಹನ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಅಥಣಿ ತಾಲೂಕಿನ ಅನಂತಪುರ-ತಾವಂಶಿ ಸಂಪರ್ಕ ರಸ್ತೆ ಮೇಲೆ ಮಂಗಳವಾರ ನಡೆದಿದೆ.

ನಾಗನೂರ ಪಿ.ಎ. ಗ್ರಾಮದ ಅಶೋಕ ಸನದಿ (45) ಮೃತ ಸವಾರ. ಅನಂತಪುರ ಗ್ರಾಮದಿಂದ ತಾವಂಶಿ ಗ್ರಾಮದ ಕಡೆಗೆ ಹೋಗುತ್ತಿದ್ದಾಗ

ಘಟನೆ ಸಂಭವಿಸಿದೆ. ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಥಳಕ್ಕೆ ಅಥಣಿ ಡಿವೈಎಸ್ಪಿ ಪ್ರಶಾಂತ ಮುನ್ನೋಳ್ಳಿ, ಸಿಪಿಐ ಸಂತೋಷ ಹಳ್ಳೂರ, ಪಿಎಸ್‌ಐ ಗಿರಿಮಲ್ಲಪ್ಪ ಉಪ್ಪಾರ, ತನಿಖಾ ಸಹಾಯಕ ಭೀಮಸೇನ ಮನ್ನಾಪುರ ಭೇಟಿ ನೀಡಿ ಪರಿಶೀಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net