

ಲಿಂಗದಹಳ್ಳಿ: ಕಟ್ಟೆಹೊಳೆ ಕಾಫಿ ತೋಟದಲ್ಲಿ ಗೂಡ್ಸ್ ವಾಹನ 300 ಅಡಿ ಆಳದ ಕಂದಕಕ್ಕೆ ಉರುಳಿದ ಪರಿಣಾಮ ವಾಹನದಲ್ಲಿದ್ದ ಅಸ್ಸಾಂ ಮೂಲದ ಕೂಲಿ ಕಾರ್ಮಿಕ ತಾಮೇಶ್ ಎಂಬಾತ ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತಿಬ್ಬರು ಕೂಲಿ ಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಟ್ಟೆಹೊಳೆ ಕಾಫಿ ತೋಟಕ್ಕೆ ಬಳ್ಳಾವರ ಗ್ರಾಮದಿಂದ ರಸಗೊಬ್ಬರ ತೆಗೆದುಕೊಂಡು ವಾಪಸ್ ಬರುತ್ತಿದ್ದಾಗ ಚಾಲಕ ಬಾಬು ನಿರ್ಲಕ್ಷೃದಿಂದ ವಾಹನ ಚಾಲನೆ ಮಾಡಿದ್ದರಿಂದ ಅಪಘಾತ ಸಂಭವಿಸಿದೆ ಎಂದು ಲಿಂಗದಹಳ್ಳಿ ಪೊಲೀಸ್ ಠಾಣಾಧಿಕಾರಿ ಶಶಿಕುಮಾರ್ ತಿಳಿಸಿದ್ದಾರೆ. ವಾಹನದಲ್ಲಿದ್ದ ಕೂಲಿ ಕಾರ್ಮಿಕರಾದ ನೋಸರ್ ಆಲಿ ಮತ್ತು ರೋಮಿಶ ಖಾತೂನ್ ಎಂಬುವರನ್ನು ಪೊಲೀಸರು ತರೀಕೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು.