ವಾಸಿಸುವ ಸ್ಥಳ ಸ್ವಚ್ಛವಾಗಿದ್ದರೆ ಆರೋಗ್ಯಕರ ಜೀವನ

Oplus_131072
Oplus_131072
Published on

ಹಲಗೂರು: ನಮ್ಮ ಮನೆಯ ಅಂಗಳದಲ್ಲಿ ಗಿಡ-ಮರಗಳನ್ನು ಬೆಳೆಸುವುದರ ಮುಖಾಂತರ ಉತ್ತಮವಾದ ಪರಿಸರ ನಿರ್ಮಿಸಿ ಸ್ವಚ್ಛ ಆಮ್ಲಜನಕ ಪಡೆಯುವುದರ ಜತೆಗೆ ನಾವು ವಾಸಿಸುವ ಸ್ಥಳ ಸ್ವಚ್ಛತೆಯಿಂದ ಇದ್ದರೆ ಮಾತ್ರ ನಾವುಗಳು ಆರೋಗ್ಯವಂತರಾಗಿರಲು ಸಾಧ್ಯವಾಗುತ್ತದೆ ಎಂದು ಹಲಗೂರು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದಾಧಿಕಾರಿ ಡಾ. ಸೌಮ್ಯಶ್ರೀ ತಿಳಿಸಿದರು.

ಹಲಗೂರು ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿ ಹಾಗೂ ಹಲಗೂರು ಲಯನ್ಸ್ ಕ್ಲಬ್ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಮಾತನಾಡಿ, ಹಲಗೂರು ಲಯನ್ಸ್ ಕ್ಲಬ್ ಹಾಗೂ ನಮ್ಮ ಆಸ್ಪತ್ರೆಯ ಸಿಬ್ಬಂದಿ ಎಲ್ಲರೂ ಸೇರಿ ಆಸ್ಪತ್ರೆಯ ಆವರಣವನ್ನು ಸ್ವಚ್ಛಗೊಳಿಸಿದ್ದೇವೆ. ನಮಗೆ ಕಾಯಿಲೆಗಳು ಹೆಚ್ಚಾಗುವುದು ನಮ್ಮ ಸುತ್ತ ಮುತ್ತಲಿನ ವಾತಾವರಣದಿಂದ. ವಾತಾವರಣ ಸ್ವಚ್ಛವಿಲ್ಲದಿದ್ದರೆ ಚಿಕೂನ್‌ಗುನ್ಯಾ, ಡೆಂೆ, ಮಲೇರಿಯಾ ಕಾಯಿಲೆಗಳು ಬರುತ್ತವೆ. ಹೀಗಾಗಿ ಒಂದು ಮನೆಯ ವಾತಾವರಣ ಸ್ವಚ್ಛವಾಗಿದ್ದರೆ ಮನೆಯಲ್ಲೇ ವಾಸ ಮಾಡುವವರು ಆರೋಗ್ಯವಂತರಾಗಿರಲು ಸಾಧ್ಯವಾಗುತ್ತದೆ ಎಂದರು.

ಗ್ರಾಪಂ ಅಧ್ಯಕ್ಷ ಆರ್. ಶಶಿಕಲಾ ಶ್ರೀನಿವಾಸಚಾರಿ, ಹಲಗೂರು ಲಯನ್ಸ್ ಕ್ಲಬ್ ಅಧ್ಯಕ್ಷ ಎನ್.ಕೆ. ಕುಮಾರ್, ಡಿ.ಎಲ್. ಮಾದೇಗೌಡ, ಶ್ರೀನಿವಾಸ್, ಕೆ. ಶಿವರಾಜು, ಡಾ. ಸಿದ್ದರಾಜು, ಡಾ. ಶಂಶೀದ್ದೀನ್, ಮನೋಹರ, ಪದ್ಮನಾಭ, ಆಸ್ಪತ್ರೆಯ ಸಿಬ್ಬಂದಿ ತೇಜ್, ಪುನಿ, ಸಂತೋಷ್, ರಂಜಿತಾ, ಶ್ವೇತಾ, ರತ್ನಮ್ಮ ಹಾಗೂ ಆಶಾ ಕಾರ್ಯಕರ್ತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net