ವಾಸವಿ ಕನ್ನಿಕಾಪರಮೇಶ್ವರಿ ದೇವಸ್ಥಾನದಲ್ಲಿ ಚಂಡಿಕಾ ಹೋಮ

30blrp4 (1)
ಬೇಲೂರಿನ ಕೋಟೆ ಶ್ರೀ ವಾಸವಿ ಕನ್ನಿಕಾಪರಮೇಶ್ವರಿ ದೇವಸ್ಥಾನದಲ್ಲಿ ಸಹಸ್ರನಾಮ ಪಠಿಸುತ್ತಿರುವ ಸುಹಾಸಿನಿಯರು.
Published on


ಬೇಲೂರು: ಶರನ್ನವರಾತ್ರಿ ಅಂಗವಾಗಿ ಕೋಟೆ ಶ್ರೀ ವಾಸವಿ ಕನ್ನಿಕಾಪರಮೇಶ್ವರಿ ದೇವಸ್ಥಾನದಲ್ಲಿ ಶುಕ್ರವಾರ ಚಂಡಿಕಾ ಹೋಮ ವತ್ತು ಲಲಿತಸಹಸ್ರನಾಮ ನಡೆಯಿತು.


ರಾಮಚಂದ್ರ ಭಟ್ಟರ ನೇತೃತ್ವದಲ್ಲಿ ಗಣಪತಿ ಪೂಜಾ, ಪುಣ್ಯಾಹ ವಾಚನ, ನಾಂದಿ, ಮಾತೃಕಾ ಪೂಜಾ, ಋತ್ವಿಗ್ವರ್ಣ, ಅಗ್ನಿ ಪ್ರತಿಷ್ಠಾ, ನವಗ್ರಹಾದಿ ಹೋಮ, ಮೃತ್ಯುಂಜಯ ಹೋಮದ ನಂತರ ಪೂರ್ಣಾಹುತಿ ನಡೆಯಿತು. ಮಹಾಮಂಗಳಾರತಿ ನಂತರ ಭಕ್ತರಿಗೆ ತೀರ್ಥ ಪ್ರಸಾದ ವಿತರಿಸಲಾಯಿತು.


ಪೂರ್ಣಾಹುತಿ ನಂತರ ಸುಹಾಸಿನಿಯರಿಂದ ಲಲಿತಸಹಸ್ರನಾಮ ಪಾರಾಯಣ ಮತ್ತು ಅಷ್ಟೋತ್ತರ ಪಠಿಸಲಾಯಿತು. ಆಯೋಜಕ ಬಿ.ಎನ್.ಕೃಷ್ಣಶೆಟ್ಟಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net