

ಚಿಕ್ಕಮಗಳೂರು: ಐದಾರು ದಶಕಗಳಿಂದ ವಾಸಿಸುತ್ತಿರುವ ಮನೆಗಳಿಗೆ ಹಕ್ಕುಪತ್ರ ಹಾಗೂ ೧೧-ಬಿ ನೀಡಬೇಕು ಎಂದು ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಸೋಮವಾರ ಜಿಲ್ಲಾಧಿಕಾ ರಿ ಸಿ.ಎನ್.ಮೀನಾ ನಾಗರಾಜ್ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಬಾಲಕೃಷ್ಣ ಬಿಳೇಕಲ್ಲು, ಕಳಸ ತಾಲೂಕು ತನುಡಿ ಗ್ರಾಮದ ಕಗ್ಗನಹಳ್ಳ ಸರ್ವೆ ನಂ.೩೬ರಲ್ಲಿ ಸುಮಾರು ೪೦ಕ್ಕೂ ಹೆಚ್ಚು ಕುಟುಂಬಗಳು ಆರು ದಶಕಗಳಿಂದ ಮನೆ ನಿರ್ಮಿಸಿಕೊಂಡು ವಾಸಿಸುತ್ತಿದ್ದಾರೆ ಎಂದರು.
ಪ್ರಸ್ತುತ ಆ ಮನೆಗಳಿಗೆ ಗ್ರಾಮ ಪಂಚಾಯಿತಿಯಲ್ಲಿ ಕಂದಾಯವನ್ನು ಕಟ್ಟಿಸಿಕೊಳ್ಳಲಾಗಿದೆ. ಆದರೆ ಇದುವರೆಗೂ ಸಹ ಯಾವುದೇ ತರಹದ ಮನೆಗಳಿಗೆ ಹಕ್ಕುಪತ್ರ ಹಾಗೂ ಇ-ಖಾತೆ ಆಗಿರುವುದಿಲ್ಲ. ಆದ್ದರಿಂದ ಕೂಡಲೇ ಈ ಭಾಗದಲ್ಲಿ ನಿರ್ಮಿಸಿರುವ ಎಲ್ಲ ಮನೆಗಳಿಗೆ ೧೧-ಬಿ ನೀಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕಳಸ ತಾಲೂಕು ಸಂಚಾಲಕ ವಸಂತ್‌ಕುಮಾರ್, ಮಹಿಳಾ ಸಂಚಾಲಕಿ ಪವಿತ್ರ, ಸಹ ಸಂಚಾಲಕ ರಘು, ಮುಖಂಡರಾದ ಪ್ರಸನ್ನ, ರಾಜೇಶ್ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.