

ವಿರಾಜಪೇಟೆ: ಮೂರು ದಿನಗಳಿಂದ ಪುಷ್ಯ ಮಳೆಯ ಅಬ್ಬರ ಜೋರಾಗಿದ್ದು ಸಮೀಪದ ಬಿಟ್ಟಂಗಾಲ ಗ್ರಾಮದ ಎಚ್.ಎಸ್.ಸೀತಮ್ಮ ಅವರ ವಾಸದ ಮನೆಯ ಮೇಲೆ ಭಾನುವಾರ ಮರ ಬಿದ್ದಿದೆ.
ಘಟನೆ ಹಿನ್ನೆಲೆಯಲ್ಲಿ ಮನೆಗೆ ಹಾನಿಯಾಗಿದ್ದು ಮನೆಯವರು ಅಪಾಯದಿಂದ ಪಾರಾಗಿದ್ದಾರೆ. ಕೆದಮುಳ್ಳೂರು ಗ್ರಾಮದ ಬೊಳ್ಳಿ ಮತ್ತು ಚೆಲುವ ದಂಪತಿ ಸೇರಿದ ಮನೆ ಇದಾಗಿದ್ದು, ಛಾವಣಿಗೆ ಹಾನಿಯಾಗಿದೆ. ಕಂದಾಯ ಅಧಿಕಾರಿ ಹರೀಶ್ ಮತ್ತು ಗ್ರಾಮಲೆಕ್ಕಿಗರು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದರು.