ವಾಲ್ಮೀಕಿ ಭವನಗಳಿಗೆ ಆರ್ಥಿಕ ಸಹಕಾರ

TKE (VAL
ಅಜ್ಜಂಪುರದಲ್ಲಿ ಏರ್ಪಡಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಶಾಸಕ ಜಿ.ಎಚ್.ಶ್ರೀನಿವಾಸ್ ಉದ್ಘಾಟಿಸಿದರು. ವಸಂತ್‌ಕುಮಾರ್, ಎ.ಜಿ.ರೇವಣ್ಣ, ಡಿ.ಕವಿತಾ, ಎನ್.ವಿ.ನಟೇಶ್, ಎಂ.ಕೆ.ವಿಜಯಕುಮಾರ್ ಇತರರಿದ್ದರು.
Published on

ತರೀಕೆರೆ: ತಾಲೂಕಿನ ವಿವಿಧೆಡೆ ನಿರ್ಮಿಸುತ್ತಿರುವ ವಾಲ್ಮೀಕಿ ಭವನ ಕಾಮಗಾರಿ ಪೂರ್ಣಗೊಳಿಸಲು, ವಾಲ್ಮೀಕಿ ಸಮುದಾಯದವರು ನೆಲೆಸಿರುವ ಗ್ರಾಮಗಳಲ್ಲಿ ಹೊಸ ಸಮುದಾಯ ಭವನ ನಿರ್ಮಿಸಲು ಅನುದಾನ ನೀಡುತ್ತೇನೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದರು.

ಅಜ್ಜಂಪುರದಲ್ಲಿ ತಾಲೂಕು ಆಡಳಿತದಿಂದ ಏರ್ಪಡಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಉದ್ಘಾಟಿಸಿ ಮಾತನಾಡಿ, ತರೀಕೆರೆಯಲ್ಲಿ ಆಳ್ವಿಕೆ ನಡೆಸಿದ ಪಾಳೇಗಾರ ಸರ್ಜಾ ಹನುಮಪ್ಪ ನಾಯಕ ಅವರ ಕಂಚಿನ ಪುತ್ಥಳಿ ನಿರ್ಮಿಸಲಾಗುವುದು ಎಂದರು. ಮಹರ್ಷಿ ವಾಲ್ಮೀಕಿ ರಾಮಾಯಣ ಕೃತಿಯಲ್ಲಿ ರಾಮ ರಾಜ್ಯದ ಪರಿಕಲ್ಪನೆಯನ್ನು ವಿಶೇಷವಾಗಿ ಚಿತ್ರಿಸಿದ್ದಾರೆ. ಮಹಾಕಾವ್ಯದಲ್ಲಿ ಶ್ರೀರಾಮನ ಆದರ್ಶ, ಆಳ್ವಿಕೆ ಸದ್ಯದ ಆಡಳಿತ ವ್ಯವಸ್ಥೆಗೆ ದಾರಿದೀಪವಾಗಿದೆ ಎಂದು ಹೇಳಿದರು.

ತರೀಕೆರೆ ಪುರಸಭೆ ಅಧ್ಯಕ್ಷ ವಸಂತ್‌ಕುಮಾರ್, ಅಜ್ಜಂಪುರ ಪಪಂ ಅಧ್ಯಕ್ಷ ಎ.ಜಿ.ರೇವಣ್ಣ, ಉಪಾಧ್ಯಕ್ಷೆ ಡಿ.ಕವಿತಾ, ಎಸಿ ಎನ್.ವಿ.ನಟೇಶ್, ತಾಪಂ ಇಒ ಎಂ.ಕೆ.ವಿಜಯಕುಮಾರ್, ಬಿಇಒ ಎ.ಎಚ್.ಪರಶುರಾಮಪ್ಪ, ಪಪಂ ಮುಖ್ಯಾಧಿಕಾರಿ ಟಿ.ಜಿ.ರಮೇಶ್, ವಾಲ್ಮೀಕಿ ನಾಯಕ ಸಮುದಾಯದ ತಾಲೂಕು ಅಧ್ಯಕ್ಷ ಎಚ್.ಆರ್.ಗೋವಿಂದಪ್ಪ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net