ವಾಲ್ಮೀಕಿ ನಿಗಮ ಹಗರಣದಲ್ಲಿ ಸಿಎಂ, ಡಿಸಿಎಂ ಕೈವಾಡ

13 YERRISWAMY 09
Published on

ಬಳ್ಳಾರಿ : ವಾಲ್ಮೀಕಿ ನಿಗಮದ ಬಹಕೋಟಿ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್‌ರವರ ಕೈವಾಡಯಿದೆ ಎಂದು ಮಾಜಿ ಶಾಸಕ ಅನಿಲ್ ಲಾಡ್ ಆರೋಪಿಸಿದರು.
ನಗರದ ಜೆಡಿಎಸ್ ಜಿಲ್ಲಾ ಕಚೇರಿಯಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದರು. ಮಾಜಿ ಸಚಿವ ಬಿ.ನಾಗೇಂದ್ರ, ನಗರ ಶಾಸಕ ನಾರಾ ಭರತರೆಡ್ಡಿ, ಸಂಸದ ಈ. ತುಕಾರಾಮ್, ರಾಜ್ಯಸಾ ಸದಸ್ಯ ಡಾ. ನಾಸೀರ ಹುಸೇನ್ ಸೇರಿ ಎಲ್ಲರೂ ವಾಲ್ಮೀಕಿ ನಿಗಮದ ಹಣ ಮುಟ್ಟಿಲ್ಲ ಅಂದ್ರೆ, ಸಂಡೂರು ಶ್ರೀಕುಮಾರಸ್ವಾಮಿ ಅಥವಾ ಬಳ್ಳಾರಿ ಶ್ರೀಕನಕ ದುರ್ಗಮ್ಮ ದೇಗುಲದಲ್ಲಿ ಆಣೆ ಮಾಡಲಿ, ಹಣ ದುರ್ಬಳಕೆ ಮಾಡಿದ್ದಾರೆ ಎಂದು ನಾವು ಆಣೆ ಮಾಡುತ್ತೇವೆ ಎಂದು ಸವಾಲು ಹಾಕಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಮೀನಳ್ಳಿ ತಾಯಣ್ಣ ಮಾತನಾಡಿ, ಸಂಸದ ಈ. ತುಕಾರಾಮ್ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಶೀಘ್ರದಲ್ಲೇ ಉಪ ಚುನಾವಣೆ ನಡೆಯಲಿದೆ. ಅಭ್ಯರ್ಥಿ ಯಾರು ಎಂಬುದು ವರಿಷ್ಠರು ತೀರ್ಮಾನಿಸಲಿದ್ದಾರೆ. ಎಸ್ಟಿ ಮೀಸಲು ಕ್ಷೇತ್ರಕ್ಕೇ ಜೆಡಿಎಸ್, ಬಿಜೆಪಿ ಮೈತ್ರಿ ಅಭ್ಯರ್ಥಿ ಕಣಕ್ಕಿಳಿಯಲಿದ್ದು, ಅಭ್ಯರ್ಥಿ ಯಾರೆಂಬುದು ವರಿಷ್ಠರು ನಿರ್ಧರಿಸಲಿದ್ದಾರೆ. ಜೆಡಿಎಸ್ ಅಭ್ಯರ್ಥಿ ಯಾಗಲಿ ಎಂಬುದು ನಮ್ಮ ಅಭಿಪ್ರಾಯ, ತೀರ್ಮಾನ ವೃಷ್ಟರಿಗೆ ಬಿಟ್ಟಿದ್ದು, ಯಾರಿಗೆ ಟಿಕೆಟ್ ಕೊಟ್ಟರೂ ಈ ಬಾರಿ ಗೆಲುವು ನಮ್ಮದಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮುಖಂಡರಾದ ರಾಜೂ ನಾಯಕ್, ಸೋಮಪ್ಪ, ಲಕ್ಷ್ಮಿ ಕಾಂತ ರೆಡ್ಡಿ, ಶಿವನಾರಾಯಣ, ಹೊನ್ನೂರು ಸ್ವಾಮಿ, ಕಿರಣ್ ಕುಮಾರ, ಅಶೋಕ ಸಂಗನಕಲ್ಲು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net