ವಾಲ್ಮೀಕಿ ಜಯಂತಿ ಸಮುದಾಯದ ಕಾರ್ಯಕ್ರಮ ಅಲ್ಲ

IMG-20241109-WA0003
Published on

ಎಚ್.ಡಿ.ಕೋಟೆ: ಪಟ್ಟಣದಲ್ಲಿ ನ.12 ರಂದು ನಡೆಯುವ ವಾಲ್ಮೀಕಿ ಜಯಂತಿ ಕಾರ್ಯಕ್ರಮವು ಒಂದು ಪಕ್ಷದ ಕಾರ್ಯಕ್ರಮವೇ ಹೊರತು ಸಮುದಾಯದ ಕಾರ್ಯಕ್ರಮ ಅಲ್ಲ ಎಂದು ಮಾಜಿ ಶಾಸಕ ಬೀಚನಹಳ್ಳಿ ಚಿಕ್ಕಣ್ಣ ಆರೋಪ ಮಾಡಿದರು.

ಶಾಸಕ ಸಿ.ಅನಿಲ್ ಕುಮಾರ್ ಅವರು ಸಮಾಜ ಒಂದುಗೂಡಿಸುವ ಬದಲು ಸಮಾಜ ಒಡೆಯುವ ಕೆಲಸ ಮಾಡುತ್ತಿದು, ಈ ಧೋರಣೆ ಬದಲಾಗಬೇಕು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ತಾಲೂಕು ನಾಯಕ ಸಮಾಜದ ಅಧ್ಯಕ್ಷ ಎಂ.ಸಿ.ದೊಡ್ಡನಾಯಕ ಅವರನ್ನು ಕಡೆಗಣಿಸಿ, ಸರಗೂರು ತಾಲೂಕಿನ ಶಂಭುಲಿಂಗನಾಯಕ ಅವರ ಅಧ್ಯಕ್ಷತೆಯಲ್ಲಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಮಾಡುತ್ತಿದ್ದು, ಈ ಕಾರ್ಯಕ್ರಮವನ್ನು ನಾವು ಬಹಿಷ್ಕರಿಸುತ್ತೇವೆ ಎಂದು ತಿಳಿಸಿದರು.

ಈಗಾಗಲೇ ಶಂಭುಲಿಂಗನಾಯಕ ಅವರು ಕೋಟೆ ತಾಲೂಕಿನ ನಾಯಕ ಸಂಘದ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ್ದು, ಸಮಾಜದ ಮುಖಂಡರುಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಎಂ.ಸಿ.ದೊಡ್ಡನಾಯಕರನ್ನು ತಾಲೂಕು ನಾಯಕ ಸಂಘದ ಅಧ್ಯಕ್ಷರನ್ನರಾಗಿ ಸರ್ವಾನುಮತದಿಂದ ನೇಮಕಮಾಡಲಾಗಿದೆ. ಆದರೆ ಶಾಸಕರು ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.

ತಾಲೂಕು ನಾಯಕ ಸಂಘದ ಅಧ್ಯಕ್ಷ ಎಂ ಸಿ ದೊಡ್ಡನಾಯಕ, ತಾಲೂಕು ನಾಯಕ ಸಂಘದ ಉಪಾಧ್ಯಕ್ಷ ನಾಗರಾಜು, ಪ್ರಧಾನ ಕಾರ್ಯದರ್ಶಿ ಚಾಕಳ್ಳಿ ಕೃಷ್ಣ, ಕಾರ್ಯದರ್ಶಿ ನಾಗನಾಯಕ, ಗ್ರಾಪಂ ಮಾಜಿ ಅಧ್ಯಕ್ಷ ಸೋಮನಾಯಕ, ಟೌನ್ ನಾಯಕ ಸಂಘದ ಅಧ್ಯಕ್ಷ ರಾಜನಾಯಕ, ಉಪಾಧ್ಯಕ್ಷ ಬೀರ ನಾಯಕ, ಮುಖಂಡರಾದ ಜವರ ನಾಯಕ, ಚಂದನಾಯಕ, ನಿಂಗನಾಯಕ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net