ವಾಲ್ಮೀಕಿ ಆದರ್ಶಗಳು ಮನುಕೂಲಕ್ಕೆ ಮಾದರಿ

blg-7-1
ಬೀಳಗಿ ತಾಲೂಕಾ ಆಡಳಿತ ಕಚೇರಿಯ ಆವರಣದಲ್ಲಿ ತಾಲೂಕಾ ಆಡಳಿತ, ಸಮಾಜ ಕಲ್ಯಾಣ ಇಲಾಖೆ ಸಯುಂಕ್ತ ಆಶ್ರಯದಲ್ಲಿ ಶ್ರೀ ಮಹಿರ್ಷಿ ವಾಲ್ಮೀಕಿ ಜಯಂತ್ಯೋತ್ಸವ ಕಾರ್ಯಕ್ರಮ ಶಾಸಕ ಜೆ.ಟಿ.ಪಾಟೀಲ ಉದ್ಘಾಟಿಸಿದರು. ಎಂಎಲ್ಸಿ ಎಚ್.ಆರ್.ನಿರಾಣಿ, ತಹಸೀಲ್ದಾರ ವಿನೋದ ಹತ್ತಳ್ಳಿ ಇದ್ದರು.
Published on

ಬಾಗಲಕೋಟೆ: ಜಗತ್ತು ಕಂಡ ಅತ್ಯಂತ ಪ್ರಸಿದ್ಧ ಮಹಾಗ್ರಂಥ ರಾಮಾಯಣ ಬರೆದು ಮನುಕೂಲಕ್ಕೆ ಮಾದರಿಯಾಗಿವೆ. ರಾಮಾಯಾಣ ಬದುಕಿಗೇ ಆದರ್ಶವಾಗಿದೆ. ಇಂತಹ ಮಹಾತ್ಮ ಗ್ರಂಥ ರಚಿಸಿದ ಮಹಾಕವಿ ಮಹರ್ಷಿ ವಾಲ್ಮೀಕಿ ಕೊಡುಗೆ ಅಪಾರವಾಗಿದೆ ಎಂದು ಶಾಸಕ ಜೆ.ಟಿ.ಪಾಟೀಲ ಹೇಳಿದರು.

ಬೀಳಗಿ ತಾಲೂಕಾ ಆಡಳಿತ ಕಚೇರಿಯ ಆವರಣದಲ್ಲಿ ಮಂಗಳವಾರ ತಾಲೂಕಾ ಆಡಳಿತ, ಪಟ್ಟಣ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಸಯುಂಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಮಹಿರ್ಷಿ ವಾಲ್ಮೀಕಿ ಜಯಂತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ರಾಮಾಯಣದಲ್ಲಿ ಬರುವ ಪಾತ್ರಗಳು ಆದರ್ಶಮಯವಾಗಿವೆ. ನಿತ್ಯವು ನಮ್ಮ ಮಕ್ಕಳಿಗೆ ಅವುಗಳ ಬಗ್ಗೆ ತಿಳಿಸುವ ಕೆಲಸವಾಗಬೇಕು. ಪಾಠ, ಆಟದ ಜೊತೆಗೆ ಮೌಲ್ಯಯುತ ಜೀವನ ಕಲಿಸಿಕೊಟ್ಟಾಗ ಸುಂದರ ಸಮಾಜ ಕಾಣಲು ಸಾಧ್ಯವಿದೆ ಎಂದರು.

ಡಾ.ಬಿ.ಆರ್.ಅಂಬೇಡ್ಕರ ಅವರು ಬರೆದ ಸಂವಿಧಾನದAತೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಇನ್ನೂ ಎತ್ತರಕ್ಕೆ ಬರಬೇಕಾಗಿತ್ತು. ಆದರೆ ಸಾಧ್ಯವಾಗಿಲ್ಲ. ಸಮಾಜ ಬಲಿಷ್ಠವಾಗಬೇಕಾದರೆ ಶಿಕ್ಷಣ ಮುಖ್ಯ. ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯ ರಂಗಗಳಲ್ಲಿ ಮಂದೆ ಬರಬೇಕಾದರೆ ಶಿಕ್ಷಣದಿಂದ ಮಾತ್ರ ಸಾಧ್ಯ. ಶಿಕ್ಷಣಕ್ಕೆ ಬಹಳ ಮಹತ್ವ ಇದೆ. ಈ ನಿಟ್ಟಿನಲ್ಲಿ ಸರ್ಕಾರವು ಸಾಕಷ್ಟು ಸೌಲಭ್ಯ ನೀಡುತ್ತಿದೆ. ಅವುಗಳ ಸದ್ಬಳಿಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ನಮ್ಮ ದೇಶದಲ್ಲಿ ಕೋಟ್ಯಂತರ ಜನರು ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದಾರೆ. ದುಶ್ಚಟಗಳ ಪರಿಣಾಮ ವ್ಯಸನಿಗಳಾಗಿದ್ದಾರೆ. ಇದಕ್ಕೆ ಮುಕ್ತಿ ನೀಡಿ ಶಿಕ್ಷಣವಂತರಾಗಬೇಕು. ವಾಲ್ಮೀಕಿ ಸಮಾಜದ ಯಾವುದೇ ಕೆಲಸ ಇರಲ್ಲಿ ನಾನು ಮುಂಚೂಣಿಯಲ್ಲಿ ನಿಲ್ಲುತ್ತೇನೆ. ಸರ್ಕಾರದ ಯೋಜನೆಗಳ ಲಾಭ ಪಡೆದ ಜನರು ಸರ್ಕಾರದ ಋಣ ತಿರಿಸುವ ಕೆಲಸ ಮಾಡಬೇಕು ಎಂದರು.

ವಿಧಾನ ಪರಿಷತ್ ಸದಸ್ಯ ಎಚ್.ಆರ್.ನಿರಾಣಿ ಮಾತನಾಡಿ, ಆದಿಕವಿ ಮಹರ್ಷಿ ವಾಲ್ಮೀಕಿಯವರು ಬರೆದ ರಾಮಾಯಣ ಗ್ರಂಥವು ಮನುಕೂಲಕ್ಕೆ ನೀಡಿದ ಶ್ರೇಷ್ಠ. ಒಂದೇ ಸಮಾಜಕ್ಕೆ ವಾಲ್ಮೀಕಿ ಮಹರ್ಷಿಗಳನ್ನು ಸಿಮೀತಗೊಳಿಸಬಾರದು ಎಂದು ತಿಳಿಸಿದರು.

ವಾಲ್ಮೀಕಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಆರ್.ಜಿ.ಸನ್ನಿ ಉಪನ್ಯಾಸ ನೀಡಿದರು. ತಹಸೀಲ್ದಾರ ವಿನೋದ ಹತ್ತಳ್ಳಿ, ಪಪಂ ಅಧ್ಯಕ್ಷ ಮುತ್ತು ಬೋರ್ಜಿ, ಉಪಾಧ್ಯಕ್ಷೆ ಕಲಾವತಿ ಗಡ್ಡದವರ, ತಾಪಂ ಶ್ರೀನಿವಾಸ ಪಾಟೀಲ, ಸಿಪಿಐ ಎಚ್.ಬಿ.ಸಣಮನಿ, ಪಪಂ ಮುಖ್ಯಾಽಕಾರಿ ದೇವೇಂದ್ರ ಧನಪಾಲ, ಸಮಾಜ ಕಲ್ಯಾಣ ಅಽಕಾರಿ ಸಿ.ಎಸ್.ಗಡ್ಡದೇವರಮಠ, ವಾಲ್ಮೀಕಿ ಸಮಾಜ ತಾಲೂಕಾ ಅಧ್ಯಕ್ಷ ಟಿ.ವೈ.ಜಾನಮಟ್ಟಿ, ಸಿಂಧೂರ ಲಕ್ಷ÷್ಮಣ ಟ್ರಸ್ಟ್ ಅಧ್ಯಕ್ಷ ಶಂಕರ ತಳವಾರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net