ವಾಲ್ಮೀಕಿ ಅವರ ಪುತ್ಥಳಿ ಆದಷ್ಟು ಬೇಗ ನಿರ್ಮಾಣವಾಗಲಿ

H.V.Chandru
Published on

ಚಾಮರಾಜನಗರ: ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿ ವಾಲ್ಮೀಕಿ ಅವರ ಪುತ್ಥಳಿ ನಿರ್ಮಾಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಂಕುಸ್ಥಾಪನೆ ನೆರವೇರಿಸಿದ್ದು, ಸಿಎಂ ಸಿದ್ದರಾಮಯ್ಯ ಅವರಿಂದಲೇ ಪ್ರತಿಮೆ ಅನಾವರಣಗೊಳ್ಳಲಿ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಎಚ್.ವಿ.ಚಂದ್ರು ಆಗ್ರಹಿಸಿದರು.

ಜಿಲ್ಲೆಯ ನಾಯಕ ಸಮುದಾಯದವರು ಶ್ರೀಮಹರ್ಷಿ ವಾಲ್ಮೀಕಿ ಪ್ರತಿಮೆ ನಿರ್ಮಾಣ ಮಾಡುವಂತೆ ಸಿಎಂ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಲಾಗಿತ್ತು. ಪ್ರತಿಮೆ ನಿರ್ಮಾಣಕ್ಕೆ ಅವರು ಒಪ್ಪಿಗೆ ಸೂಚಿಸಿ ಇದರೊಂದಿಗೆ ಶ್ರೀಕನಕದಾಸರು ಹಾಗೂ ಶ್ರೀಭಗೀರಥ ಪ್ರತಿಮೆ ನಿರ್ಮಾಣಕ್ಕೂ 50 ಲಕ್ಷ ರೂ, ಅನುದಾನ ನೀಡಿದರು. ಅದರಂತೆ ಏ.25 ರಂದು ಭೂಮಿಪೂಜೆಯನ್ನು ನೆರವೇರಿಸಿದರು. ಸಮುದಾಯದವರ ಆಶಯದಂತೆ ಆದಷ್ಟು ಬೇಗ ಪ್ರತಿಮೆ ನಿರ್ಮಾಣವಾಗಲಿ, ಸಿದ್ದರಾಮಯ್ಯ ಅವರಿಂದಲೇ ಉದ್ಘಾಟನೆಯಾಗಲಿ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ವಾಲ್ಮೀಕಿ ಪ್ರತಿಮೆ ನಿರ್ಮಾಣಕ್ಕೆ ಈಗಾಗಲೇ ಸರ್ಕಾರ 50 ಲಕ್ಷ ರೂ ಅನುದಾನ ನೀಡಿದೆ. ಇದು ಸಾಲದಿದ್ದರೆ ಜನಾಂಗದಿಂದಲೇ ವಂತಿಗೆ ಸಂಗ್ರಹಿಸಿ ಪುತ್ಥಳಿ ನಿರ್ಮಾಣಕ್ಕೆ ಸಹಕರಿಸಲಾಗುವುದು ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರಮೇಶ್, ಗ್ರಾ.ಪಂ. ಸದಸ್ಯ ಸಿದ್ದನಾಯಕ, ಮುಖಂಡರಾದ ಬಂಗಾರ ನಾಯಕ, ವೆಂಕಟೇಶ್, ಗುಂಬಳ್ಳಿ ರಾಜಣ್ಣ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net