ವಾಲ್ಮಿಯಲ್ಲಿ ವನಮಹೋತ್ಸವ

19 vikram 5
Published on

ಧಾರವಾಡ: ಜಾಗತಿಕ ತಾಪಮಾನ ತಡೆಯುವ ನಿಟ್ಟಿನಲ್ಲಿ ಹಾಗೂ ಸಸ್ಯ ಸಂಪತ್ತನ್ನು ಹೆಚ್ಚಿಸುವ ಉದ್ದೇಶದಿಂದ ಇಲ್ಲಿನ ಜಲ ಮತ್ತು ನೆಲ ನಿರ್ವಹಣಾ ಸಂಸ್ಥೆ (ವಾಲ್ಮಿ) ಆವರಣದಲ್ಲಿ ಮಂಗಳವಾರ ವನಮಹೋತ್ಸವ ಆಚರಿಸಲಾಯಿತು.
ವಾಲ್ಮಿ ನಿರ್ದೇಶಕ ರಾಜೇಶ ಅಮ್ಮಿನಭಾವಿ, ಕರ್ನಾಟಕ ನೀರಾವರಿ ನಿಗಮ ನಿಯಮಿತದ ಪ್ರಧಾನ ವ್ಯವಸ್ಥಾಪಕ (ಹಣಕಾಸು) ವಿಷ್ಣು ವರ್ಮನ್, ಹುಬ್ಬಳ್ಳಿಯ ಕೆಎಲ್‌ಇಐಟಿ ಪ್ರಾಂಶುಪಾಲ ಡಾ. ಶರದ ಜೋಶಿ, ಕೆಎಲ್‌ಇಐಟಿ ಕಾಲೇಜಿನ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ರಾಜಶೇಖರ ಲದ್ದಿಮಠ ಸಸಿಗಳನ್ನು ನೆಟ್ಟು ನೀರುಣಿಸಿದರು.
ಕಾರ್ಯಕ್ರಮ ಸಂಯೋಜಕಿ ಸುವರ್ಣಾ ದೊಡ್ಡಮನಿ ಮಾತನಾಡಿ, ಒಟ್ಟು 150 ಸಿಲ್ವರ್ ಓಕ್ ಮತ್ತು ಮಹಾಗನಿ ಸಸಿಗಳನ್ನು ನೆಡಲಾಗಿದೆ. ಮುಂದಿನ ದಿನಗಳಲ್ಲಿ ವಾಲ್ಮಿ ಆವರಣದಲ್ಲಿ ಸುಮಾರು 500 ಸಸಿಗಳನ್ನು ನೆಟ್ಟು ಬೆಳೆಸುವ ಉದ್ದೇಶ ಹೊಂದಲಾಗಿದೆ ಎಂದರು.
ವಾಲ್ಮಿ ಹಿರಿಯ ಅಧಿಕಾರಿಗಳಾದ ಪ್ರೊ. ಬಿ.ವೈ. ಬಂಡಿವಡ್ಡರ್, ಪ್ರೊ. ಸುವರ್ಣಾ ದೊಡ್ಡಮನಿ, ಪ್ರೊ. ಜಿ. ಭೀಮಾ ನಾಯ್ಕ, ಮಹಾದೇವಗೌಡ ಹುತ್ತನಗೌಡರ, ಸಹ ಪ್ರಾಧ್ಯಾಪಕರು, ಸಹಾಯಕ ಪ್ರಾಧ್ಯಾಪಕರು, ಅಧಿಕಾರಿಗಳು, ಸಿಬ್ಬಂದಿ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net