

ಸುಂಟಿಕೊಪ್ಪ: ಹಳೆಯ ವಿದ್ಯಾರ್ಥಿಗಳ ಗೆಳೆಯರ ಬಳಗ ಗುಂಡುಗುಟ್ಟಿ ಹಾಗೂ ಪನ್ಯ ಎಫ್.ಸಿ. ವತಿಯಿಂದ ಗುಂಡುಗುಟ್ಟಿ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಿದ್ದ ಪ್ರಥಮ ವರ್ಷದ ವಾಲಿಬಾಲ್ ಪಂದ್ಯಾಟದಲ್ಲಿ ಮಹೇಶ್ ಫ್ರೆಂಡ್ಸ್ ಪ್ರಥಮ ಸ್ಥಾನ ಪಡೆದುಕೊಂಡರೆ, ದ್ವಿತೀಯ ಸ್ಥಾನ ಮಹೇಶ್ ಫ್ರೆಂಡ್ಸ್ ಬಿ ತಂಡಕ್ಕೆ ಲಭಿಸಿದೆ.
ಮುಕ್ತ ವಾಲಿಬಾಲ್ ಪಂದ್ಯಾವಳಿಯಲ್ಲಿ ಜಿಲ್ಲೆಯ ವಿವಿಧೆಡೆಯಿಂದ ಒಟ್ಟು 16 ತಂಡಗಳು ಪಾಲ್ಗೊಂಡಿದ್ದವು. ಗುಂಡುಗುಟ್ಟಿ ಶಾಲೆಯ ಹಳೆಯ ವಿದ್ಯಾರ್ಥಿಗಳು ಒಂದೆಡೆ ಸೇರಿ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದು, ಹಳೆಯ ನೆನಪುಗಳನ್ನು ಹಂಚಿಕೊಂಡು ಸೌಹಾರ್ದತೆ ಮೆರೆದರು.
ಹಳೆಯ ವಿದ್ಯಾರ್ಥಿ ಗೆಳೆಯ ಬಳಗದ ಅಧ್ಯಕ್ಷ ವಿಶ್ವ ಉಪಾಧ್ಯಕ್ಷರಾದ ಮಂಜು, ಶ್ರೀನಿವಾಸ್, ಲಿಖಿತ್, ಕಾರ್ಯದರ್ಶಿ ಕೇಶವ, ಖಜಾಂಚಿ ತೇಜಸ್, ಸಂಘಟನಾ ಕಾರ್ಯದರ್ಶಿಗಳಾದ ಸುಜಿ, ಪೊನ್ನಪ್ಪ, ರಮೇಶ್, ಗಣೇಶ್ ಪದಾಧಿಕಾರಿಗಳಾದ ಅರುಣ, ಅಣ್ಣಪ್ಪ, ಕಾರ್ತಿಕ್, ಕಿರಣ್‌ಕುಮಾರ್, ಕೊರಗಪ್ಪ(ಅರುಣ), ಗಣೇಶ್, ಪ್ರಜ್ವಲ್ ಪ್ರವೀಣ ಹಾಗೂ ಮತ್ತಿತರರ ಪದಾಧಿಕಾರಿಗಳು ಇತರರಿದ್ದರು.