ವಾಲಿಬಾಲ್ ಟೂರ್ನಿಯಲ್ಲಿ ಮಂಡುವಂಡ ಚಾಂಪಿಯನ್

2 gkp 07
ಕೊಡವ, ಅಮ್ಮಕೊಡವ ಕೌಟುಂಬಿಕ ವಾಲಿಬಾಲ್ ವಿಜೇತ ಮಂಡುವಂಡ ತಂಡ
Published on

ಗೋಣಿಕೊಪ್ಪ: ಮಾಯಮುಡಿ ಮಾನಿಲ್ ಅಯ್ಯಪ್ಪ ಮೈದಾನದಲ್ಲಿ ಮಾನಿಲ್ ಅಯ್ಯಪ್ಪ ಸೇವಾ ಸಮಿತಿ, ಯುವಕ ಸಂಘ, ಕೊಡವ ಕೂಟ ಮತ್ತು ಅಖಿಲ ಅಮ್ಮಕೊಡವ ಸಮಾಜದ ವತಿಯಿಂದ ಭಾನುವಾರ ಆಯೋಜಿಸಿದ್ದ ಕೊಡವ, ಅಮ್ಮಕೊಡವ ಕೌಟುಂಬಿಕ ವಾಲಿಬಾಲ್ ಟೂರ್ನಿಯಲ್ಲಿ ಮಂಡುವಂಡ ಚಾಂಪಿಯನ್ ಪಟ್ಟ ಅಲಂಕರಿಸಿದ್ದು, ಅಮ್ಮಂಡ ದ್ವಿತೀಯ ಸ್ಥಾನ ಪಡೆಯಿತು. ಮುಂಡಚಾಡೀರ ತಂಡ 3ನೇ ಸ್ಥಾನ, ಮಲ್ಲಮಾಡ ನಾಲ್ಕನೇ ತಂಡವಾಗಿ ಹೊರಹೊಮ್ಮಿತು.

ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ಸಣ್ಣುವಂಡ ವಿನು ವಿಶ್ವನಾಥ್ ಪ್ರಥಮ, ಚಿಯಕ್‌ಪೂವಂಡ ಚೇತನ್ ದ್ವಿತೀಯ, ಬಡುವಡ ಧನು ದೇವಯ್ಯ ತೃತೀಯ ಸ್ಥಾನ ಪಡೆದರು. ದ್ವಿತೀಯ ಪಿಯುಸಿಯಲ್ಲಿ ಜಿಲ್ಲೆಗೆ ಪ್ರಥಮ ರ‌್ಯಾಂಕ್, ರಾಜ್ಯಕ್ಕೆ 7ನೇ ರ‌್ಯಾಂಕ್ ಪಡೆದ ಆಪಟ್ಟೀರ ಕವಿನಾ ಚಂಗಪ್ಪ ಅವರನ್ನು ಸನ್ಮಾನಿಸಲಾಯಿತು.

ಸಾಮಾಜಿಕ ಕಾರ್ಯಕರ್ತ ತೇಲಪಂಡ ಶಿವಕುಮಾರ್ ನಾಣಯ್ಯ, ಕಂಗಳತ್‌ನಾಡ್ ಮಹಿಳಾ ಸಮಾಜ ಅಧ್ಯಕ್ಷೆ ಚೆಪ್ಪುಡೀರ ರಾಧಾ ಅಚ್ಚಯ್ಯ, ಉದ್ಯಮಿ ಸಣ್ಣುವಂಡ ಎಂ.ಸುರೇಶ್, ಸಣ್ಣುವಂಡ ದಿಲಿಪ್ ಸೋಮಣ್ಣ, ಕಾಫಿ ಬೆಳೆಗಾರ ಸಣ್ಣುವಂಡ ವಿನು ವಿಶ್ವನಾಥ್ ಬಹುಮಾನ ವಿತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net