

ಹನೂರು: ಪಟ್ಟಣದ ಶ್ರೀ ಮಹದೇಶ್ವರ ಕ್ರೀಡಾಂಗಣದಲ್ಲಿ ನಡೆದ ಹೋಬಳಿ ಮಟ್ಟದ ಪ್ರಾಥಮಿಕ ಶಾಲಾ ಕ್ರೀಡಾಕೂಟದಲ್ಲಿ ಶ್ರೀ ವಿವೇಕಾನಂದ ಶಾಲೆಯ ವಿದ್ಯಾರ್ಥಿಗಳು ವಿವಿಧ ಪಂದ್ಯಾವಳಿಯಲ್ಲಿ ಜಯ ಗಳಿಸಿದ್ದಾರೆ.
ವಾಲಿಬಾಲ್ ಹಾಗೂ ಕಬಡ್ಡಿಯಲ್ಲಿ ಬಾಲಕರ ತಂಡ ಪ್ರಥಮ ಸ್ಥಾನ ಪಡೆದುಕೊಂಡರೆ ಖೋ ಖೋದಲ್ಲಿ ದ್ವಿತೀಯ ಸ್ಥಾನ, ಖೋ-ಖೋ ಹಾಗೂ ಕಬಡ್ಡಿಯಲ್ಲಿ ಬಾಲಕಿಯರು ಪ್ರಥಮ ಹಾಗೂ ಥ್ರೋ ಬಾಲ್ ಪಂದ್ಯದಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.
100, 200ಮೀ ಓಟದಲ್ಲಿ ವಿ.ಜೀವನ್, 400ಮೀ ನಲ್ಲಿ ಕೆ.ಚಿರಾಗ್, 600ಮೀ ನಲ್ಲಿ ಎನ್. ಸೋಹನ್ ಕುಮಾರ್ ಪ್ರಥಮ ಸ್ಥಾನ ಪಡೆದರೆ 4100ಮೀ ಓಟದ ಸ್ಪರ್ಧೆಯಲ್ಲಿ ಬಾಲಕರು ಹಾಗೂ ಗುಂಡು ಎಸೆತದಲ್ಲಿ ಮಲ್ಲಿಕಾರ್ಜುನ್, ಉದ್ದ ಜಿಗಿತದಲ್ಲಿ ಡಿ.ತಿರುಪತಿ ಪ್ರಥಮ ಸ್ಥಾನ ಗಳಿಸಿದ್ದಾರೆ. ಬಾಲಕಿಯರ ವಿಭಾಗದಲ್ಲಿ 100ಮೀ, 200ಮೀ ಓಟದಲ್ಲಿ ಸಿ.ಎಸ್ ಸಂಜನಾ, 600 ಮೀ. ಸ್ಪರ್ಧೆಯಲ್ಲಿ ವಿದ್ಯಾಶ್ರೀ ಪ್ರಥಮ ಸ್ಥಾನ ಗಳಿಸಿದ್ದಾರೆ. ದ್ವಿತೀಯ ಸ್ಥಾನ: 200ಮೀ. ಓಟದ ಸ್ಪರ್ಧೆಯಲ್ಲಿ ಉನೈಜ್ ಖಾನ್, 400 ಮೀ.ನಲ್ಲಿ ಎಸ್.ಆಕಾಶ್, 600ಮೀ.ನಲ್ಲಿ ಎಲ್. ವಿನಯ್, ತಟ್ಟೆ ಎಸೆತದಲ್ಲಿ ಮಲ್ಲಿಕಾರ್ಜುನ್, ವಿದ್ಯಾಶ್ರೀ, ಉದ್ದ ಜಿಗಿತದಲ್ಲಿ ಸಂಜನಾ ಹಾಗೂ 4100 ಓಟದಲ್ಲಿ ಬಾಲಕಿಯರು ದ್ವಿತೀಯ ಸ್ಥಾನ ಪಡೆದಿದ್ದಾರೆ. ಸಾಧನೆಗೈದ ವಿದ್ಯಾರ್ಥಿಗಳನ್ನು ದೈಹಿಕ ಶಿಕ್ಷಣ ಶಿಕ್ಷಕರಾ ಬಬಿತ, ಸಂಸ್ಥೆ ಅಧ್ಯಕ್ಷೆ ಉಮಾ, ಕಾರ್ಯದರ್ಶಿ ಸುರೇಶ್‌ನಾಯ್ಡು, ಸಂಚಾಲಕ ರಾಜೇಂದ್ರನ್, ಮುಖ್ಯ ಶಿಕ್ಷಕಿ ಸತ್ಯಪ್ರಿಯಾ ಹಾಗೂ ಪ್ರಾಂಶುಪಾಲ ಮಧುಸೂದನ್ ಅಭಿನಂದಿಸಿದ್ದಾರೆ.