

ಕೊಪ್ಪಳ: ಕುಷ್ಟಗಿ ತಾಲ್ಲೂಕಿನ ಕ್ಯಾದಿಗುಪ್ಪ ಗ್ರಾಮದ ಸರ್ಕಾರಿ ಪ್ರೌಢ ಶಾಲೆ ವಿಜ್ಞಾನ ಶಿಕ್ಷಕ ಬಸವರಾಜ ವಾಲಿಕಾರ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
2002 ರಲ್ಲಿ ಕುಷ್ಟಗಿ ತಾಸೂಕಿನ ಸೇಬಿನಕಟ್ಟಿ ಸಹಿಪ್ರಾ ಶಾಲೆಯಲ್ಲಿ ಶಿಕ್ಷಕ ವೃತ್ತಿ ಆರಂಭಿಸಿದ್ದಾರೆ. ವಿಜ್ಞಾನ ವಿಷಯದಲ್ಲಿ ಬಿಇಡಿ ಮುಗಿಸಿ ಹಿರೇಗೊಣ್ಣಾಗರ ಸರ್ಕಾರಿ ಪ್ರೌಢ ಶಾಲೆಗೆ ವಿಜ್ಞಾನ ಶಿಕ್ಷಕರಾಗಿ ಬಡ್ತಿ ಪಡೆದಿದ್ದಾರೆ. ಕ್ರೀಯಾಶೀಲತೆ ಮತ್ತು ಸಂಘಟನಾ ಕಲೆ ಮೈಗೂಡಿಸಿಕೊಂಡಿದ್ದು, ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಲು ಪ್ರೇರಕವಾಗುವಂತೆ ಬೋಧನೆ ಮಾಡುತ್ತಾರೆ. ಹಲವಾರು ವಿಜ್ಞಾನ ಚಟುವಟಿಕೆಗಳನ್ನು ಹಮ್ಮಿಕೊಂಡು ಮಾದರಿಯಾಗಿದ್ದಾರೆ.
ಸದ್ಯ ಕುಷ್ಟಗಿ ತಾಲೂಕು ವಿಜ್ಞಾನ ಶಿಕ್ಷಕರ ಸಂಘದ ಅಧ್ಯಕ್ಷರಾಗಿದ್ದು, ಕ್ರಿಯಾತ್ಮಕ ಚಟುವಟಿಕೆಗಳ ಮೂಲಕ ಮಕ್ಕಳ ನೆಚಚಿನ ಶಿಕ್ಷಕರಾಗಿದ್ದಾರೆ. ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಸದಸ್ಯರಾಗಿದ್ದಾರೆ. ಜಿಲ್ಲಾ ಮಟ್ಟದ ಕಲಿಕಾ ಮಿತ್ರರಾಗಿ ಇಲಾಖೆಮಾರ್ಗದರ್ಶನದಂತೆ 2021 -22 ನೇ ಸಾಲಿನ ಮತ್ತು 2022-23 ನೇ ಸಾಲಿನಲ್ಲಿ ವಿಜ್ಞಾನ ಚಿಗುರು ಪುಸ್ತಕ ತಯಾರಿಸಿ ಜಿಲ್ಲೆಯ ಎಲ್ಲ ಶಾಲಾ ಮಕ್ಕಳಿಗೆ ತಲುಪಿಸಿದ್ದಾರೆ. 2021 ನೇ ಸಾಲಿನಲ್ಲಿ ವಿಜ್ಞಾನ ವಿಷಯದ ಪಾಸಿಂಗ್ ಪ್ಯಾಕೇಜ್ ರಚಿಸಿ ಕುಷ್ಟಗಿ ತಾಲೂಕಿನ ಶಾಲೆಗಳಿಗೆ ಹಂಚಿರುವುದು ವಿಶೇಷ.